ವಿಜಯಪುರ, ಜೂನ್ 11 :-
2024-25ನೇ ಸಾಲಿಗೆ ಸಮನ್ವಯ ಶಿಕ್ಷಣ ಚಟುವಟಿಕೆಗಳ (ವಿಶೇಷ ಚೇತನ ಮಕ್ಕಳಿಗೆ ಬೋಧನೆ ಹಾಗೂ ಸಂಬoಧಿಸಿದ ಇತರೆ ಚಟುವಟಿಕೆಗಳು) ಅನುಷ್ಠಾಮಕ್ಕಾಗಿ ಪ್ರಾಥಮಿಕ ಮತ್ತು ಫ್ರೌಡ ಹಂತಕ್ಕೆ ಅಗತ್ಯತೆ ಅನುಗುಣವಾಗಿ, ವಿಶೇಷ ಡಿ.ಇಡಿ( ಶ್ರವಣ ದೋಷ ಮತ್ತು ದೃಷ್ಟಿ ದೋಷ) ಹಾಗೂ ಬಿ.ಇಡಿ (ಬುದ್ದಿಮಾಂದ್ಯ ಮತ್ತು ಬಹುವಿಕಲಾಂಗತೆ) ವಿಕಲತೆಯಲ್ಲಿ ವಿಶೇಷತೆ ವಿದ್ಯಾರ್ಹತೆ ಹೊಂದಿದ ಹಾಗೂ 60 ವರ್ಷ ಒಳಗಿನ ಅರ್ಹ ಅಭ್ಯರ್ಥಿಗಳಿಂದ ನೇರ ಗುತ್ತಿಗೆ ಮೂಲಕ ವಿಶೇಷ ಶಿಕ್ಷಕರ ಸೇವೆ ಪಡೆಯಲು ಖಾಲಿ ಇರುವ 19 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ನೇರ ಗುತ್ತಿಗೆಯಡಿಯಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಜೂನ್ 19 ರಂದು ಸಂಜೆ 5 ಗಂಟೆಯ ಒಳಗಾಗಿ ಉಪನಿರ್ದೇಶಕರು (ಆಡಳಿತ) ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ-ಕರ್ನಾಟಕ ವಿಜಯಪುರ ಜಿಲ್ಲಾ ಕಚೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ಪತ್ರಾಂಕಿತ ಅಧಿಕಾರಿಗಳಿಂದ ಧೃಡೀಕರಿಸಿ, ದ್ವಿ-ಪ್ರತಿಯಲ್ಲಿ ಸಲ್ಲಿಸಲು ತಿಳಿಸಿದೆ.
ಆರ್‌ಸಿಐ ನೋಂದಣಿ ಹಾಗೂ ಚಾಲ್ತಿಯಲ್ಲಿ ಇಲ್ಲದೆ ಇರುವ ಪ್ರೊವಿಷನಲ್ ಸರ್ಟಿಪಿಕೆಟ್ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಬೇಟಿ ನೀಡಬಹುದು ಹಾಗೂ 9448999389, 9972785050ಕ್ಕೆ ಕರೆ ಮಾಡಬಹುದು ಎಂದು ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.