ವಿಶ್ವಪ್ರಕಾಶ ಟಿ ಮಲಗೊಂಡಗೆ “ಬೆಸ್ಟ್ ಆಕ್ಟರ್” ಅವಾರ್ಡ್

0
41
Share this Article
0
(0)
Views: 3

ವಿಜಯಪುರ 

ಗುಮ್ಮಟ ನಗರಿ ವಿಜಯಪುರದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ಉಪ ಸಂಪಾದಕ ಚಲನಚಿತ್ರ ನಟ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಕರುನಾಡು ಕಿರುಚಿತ್ರೋತ್ಸವದಲ್ಲಿ “ಬೆಸ್ಟ್ ಆಕ್ಟರ್” ಅವಾರ್ಡ್ ದೊರೆತಿದೆ.

ಜುಲೈ 21/2024 ರವಿವಾರ ಕೊಪ್ಪಳದ ಜೆ.ಕೆ.ಎಸ್ ಹೊಟೇಲ್ ನಲ್ಲಿ ಕವಿತಾ ಮೀಡಿಯಾ ಸೋರ್ಸ ಪ್ರೈ.ಲಿ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಆಯೋಜಿಸಿದ “ಕರುನಾಡ ಕಿರುಚಿತ್ರೋತ್ಸವ” ದಲ್ಲಿ ವಿಶ್ವಪ್ರಕಾಶ ಟಿ ಮಲಗೊಂಡ ಅವರ ಸಿನಿಮಾ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಕರುನಾಡ ಕಿರುಚಿತ್ರೋತ್ಸವದಲ್ಲಿ “ಸಿನಿ ಸಿರಿ” ಅವಾರ್ಡ್ ಈ ಪ್ರಶಸ್ತಿ ನೀಡಿ ಗೌರವಿಸಿದೆ.

ಕರುನಾಡ ಕಿರುಚಿತ್ರೋತ್ಸವ (Short Film Festival) ಸ್ಪರ್ಧೆಯಲ್ಲಿ “ತುಷಾರ್” ಚಿತ್ರವೂ ಸಹ ಭಾಗವಹಿಸಿತ್ತು. ಚಿತ್ರದಲ್ಲಿನ ನಾಯಕನ ಅಭಿನಯಕ್ಕೆ “ಬೆಸ್ಟ್ ಆಕ್ಟರ್ ಅವಾರ್ಡ” ನೀಡಿ ಗೌರವಿಸಿದೆ.

ಕಿರುಚಿತ್ರೋತ್ಸವದಲ್ಲಿ ರಾಜ್ಯದ ಹಲವು ಕಿರುಚಿತ್ರಗಳು ಭಾಗವಹಿಸಿದ್ದವು. ಬೆಸ್ಟ್ ಶಾರ್ಟ ಫಿಲಂ, ಬೆಸ್ಟ್ ಸ್ಟೋರಿ, ಹೀಗೆ ಒಟ್ಟು ಹತ್ತು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ.

ಅದರಲ್ಲಿ “2024 ಅತ್ಯುತ್ತಮ ನಟ ಬೆಸ್ಟ್ ಆಕ್ಟರ್” ಎಂದು ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಅವಾರ್ಡ್ ನೀಡಲಾಗಿದೆ.

ಕಿರುಚಿತ್ರೋತ್ಸವದಲ್ಲಿ ಹಿರಿಯ ಚಲನಚಿತ್ರ ಸಾಹಿತಿ ಹಾಗೂ ಕಿರುಚಿತ್ರೋತ್ಸವದ ಅಧ್ಯಕ್ಷ ಮಹಾಂತೇಶ ಮಲ್ಲನಗೌಡರ, ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ನಿರ್ಮಾಣದ ಶಿವಮ್ಮ ಚಲನಚಿತ್ರ ಖ್ಯಾತಿಯ ಶಿವಮ್ಮ ಯರೆಹಂಚಿನಾಳ, ಚಲನಚಿತ್ರ ನಿರ್ದೇಶಕ ಬಸವರಾಜ ಕೊಪ್ಪಳ, ಅಳವಂಡಿ ಪಿಎಸ್ಐ ನಾಗಪ್ಪ ಕೆ, ಹಿರಿಯ ಪತ್ರಕರ್ತ ಜಿ ಎಸ್ ಗೋನಾಳ, ಸಿನಿಮಾ ಪತ್ರಕರ್ತ ಬಸವರಾಜ ಕರುಗಲ್ , ಸಾಹಿತಿ ಸುರೇಶ ಕಂಬಳಿ, ಪ್ರಾಧ್ಯಾಪಕ ಪ್ರೊ. ಶರಣಪ್ಪ ಬಿಳಿಯಲಿ, ಸಮಾಜ ಸೇವಕಿ ಶಾರದಾ ಪಾನಘಂಟಿ, ಉಪನ್ಯಾಸಕ ಡಾ.ಸಿದ್ದಲಿಂಗಪ್ಫ ಕೋಟ್ನೆಕಲ್, ಹೈಬ್ರೀಡ್ ನ್ಯೂಸ್ ಸಂಸ್ಥಾಪಕ ಹಾಗೂ ಕಿರುಚಿತ್ರೋತ್ಸವ ಆಯೋಜಕ ಡಾ.ಬಿ ಎನ್ ಹೊರಪೇಟಿ, ನಟ, ನಟಿ, ನಿರ್ದೇಶಕ, ನಿರ್ಮಾಪಕ, ಬರಹಗಾರರು, ಕೊಪ್ಪಳ ಸಿನಿಮಾ ಬಳಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here