ಬೆಂಗಳೂರು, ಅಕ್ಟೋಬರ್ 03
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾಗಿರುವ ‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ ಅಡಿಯಲ್ಲಿ ಆಯುಷ್ಮನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯ ಅನುಷ್ಟಾನದಲ್ಲಿ ಭಾಗಿಯಾಗುವ ಪಾಲುದಾರರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗದಂತಹ ಯಾವುದೇ ಆರೋಪಗಳು ಕಂಡುಬಂದಲ್ಲಿ ಆರೋಪಿತರ ವಿರುದ್ಧ ದೂರು/ಮಾಹಿತಿ ನೀಡುವ ಯಾವುದೇ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಟ್ಟು ಸದರಿ ಪ್ರಕರಣಗಳ ವಿಚಾರಣೆ ನಡೆಸಲು ವಿಷಲ್ ಬ್ಲೋವೆರ್ ಪಾಲಿಸಿಯ ಅನುಷ್ಟಾನ ಕುರಿತು ಸರ್ಕಾರದ ಆದೇಶವಾಗಿದೆ.
ಈ ನಿಯಮದ ಮಾರ್ಗಸೂಚಿಗಳನ್ನು ವೆಬ್‍ಸೈಟ್ http://arogya.karnataka.gov.in ನಲ್ಲಿ ಪಡೆಯಬಹುದಾಗಿದ್ದು, ಈ ಸಂಬಂಧ ಯಾವುದೇ ದೂರುಗಳಿದ್ದರೂ ಮೊಬೈಲ್ ಸಂಖ್ಯೆ 9480819728 ಗೆ ಕರೆಮಾಡಬಹುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಕಾರ್ಯಕಾರಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.