ಬೆಂಗಳೂರು, ಆಗಸ್ಟ್ 08
ಮೈಸೂರು ಮೃಗಾಲಯವು ವೀಕ್ಷಕಕರ ಅನುಕೂಲಕ್ಕಾಗಿ ನವೀನ ಕಾರ್ಯಚಟುವಟಿಕೆಗಳನ್ನು ಕೈಗೆತ್ತಿಕೊಂಡು ಸಂಪೂರ್ಣಗೊಳಿಸಿದ್ದು, ವೀಕ್ಷಕರಿಗೆ ಲಗ್ಗೇಜ್ ಕೊಠಡಿ ಹಾಗೂ ಹುಲಿ ಮನೆ ಆವರಣದಲ್ಲಿ ಪ್ರವಾಸಿಗರ ವೀಕ್ಷಣಾ ಗ್ಯಾಲರಿ ನಿರ್ಮಾಣವು ಪ್ರಮುಖವಾದದಾಗಿದ್ದು, ಈ ನಿರ್ಮಾಣ ಕಾರ್ಯಚಟುವಟಿಕೆಗಳನ್ನು ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಆಗಸ್ಟ್ 09 ರಂದು ಮಧ್ಯಾಹ್ನ 3.00 ಘಂಟೆಗೆ ಉದ್ಘಾಟನೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗಣ್ಯವ್ಯಕ್ತಿಗಳು, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಕರ್ನಾಟಕ ಅರಣ್ಯ ಇಲಾಖೆಯ ಮತ್ತು ಮೈಸೂರು ಮೃಗಾಲಯದ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ