ಬೆಂಗಳೂರು, ನವೆಂಬರ್ 29:
ಕರ್ನಾಟಕ ರಾಜ್ಯ ಪಾನೀಯ ನಿಗಮವು “ಸಂದರ್ಶಕ ವೈದ್ಯಾಧಿಕಾರಿ” ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ರಿಟೈನರ್-ಶಿಪ್ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಯ ಕಾರ್ಯಾವಧಿಯು ಒಂದು ವರ್ಷ ಆಗಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆಯನ್ನು ಅವಲಂಬಿಸಿ ಸೇವೆಯನ್ನು ವಿಸ್ತರಿಸಬಹುದಾಗಿದೆ. ಹುದ್ದೆಯ ಅರ್ಹತಾ ಮಾನದಂಡದ ವಿವರಗಳನ್ನು ನಿಗಮದ ವೆಬ್ ಸೈಟ್ www.ksbcl.com ನಿಂದ ಪಡೆಯಬಹುದಾಗಿದೆ. ಅರ್ಹ ಅಭ್ಯರ್ಥಿಗಳು ತಾಂತ್ರಿಕ ಮತ್ತು ವಾಣಿಜ್ಯ ಪ್ರಸ್ತಾವನೆಯನ್ನು ಒಳಗೊಂಡಿರುವ ಅರ್ಜಿಗಳನ್ನು ಕಾರ್ಯನಿರ್ವಾಹಕ ನಿರ್ದೇಶಕರು (ಹಣಕಾಸು ಮತ್ತು ಆಡಳಿತ) ಇವರಿಗೆ ಮೊಹರು ಮಾಡಿದ ಮುಚ್ಚಿದ ಲಕೋಟೆಯಲ್ಲಿ ಪ್ರತ್ಯೇಕವಾಗಿ ಡಿಸೆಂಬರ್ 4 ರ ಸಂಜೆ 5.30 ರೊಳಗಾಗಿ ಸಲ್ಲಿಸುವಂತೆ ನಿಗಮದ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.