ಧಾರವಾಡ ಜೂನ್.04:
ಧಾರವಾಡ ತಾಲ್ಲೂಕಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯಿಂದ 2024-25 ನೇ ಸಾಲಿಗೆ ಪಿ.ಯು.ಸಿ ಕೋರ್ಸುಗಳಿಗೆ ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯಗಳಲ್ಲಿ ಖಾಲಿ ಇರುವ ಸ್ಥಳಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಸತಿ ನಿಲಯಗಳಲ್ಲಿ ಶೆ.50 ರಷ್ಟು ಪ.ಜಾತಿ ಮತ್ತು ಶೇ.25 ರಷ್ಟು ಪ.ವರ್ಗದ ವಿದ್ಯಾರ್ಥಿನಿಲಯಕ್ಕೆ ನಿಲಯಗಳ ಅನುಸಾರ ಖಾಲಿ ಸ್ಥಳಗಳಿಗೆ ಪ್ರವೇಶ ನೀಡಲಾಗುವುದು. ಪ್ರವೇಶ ಬಯಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆನ್‍ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ ಜುಲೈ 1, 2024 ರೊಳಗಾಗಿ ಧಾರವಾಡದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0836-2440194 ಗೆ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.