ಧಾರವಾಡ ಆಗಸ್ಟ್ 13:
ಸ್ವಾತಂತ್ರ್ಯೋತ್ಸವದ ವಿಶೇಷ ಆಚರಣೆ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಡಳಿತವು ಸ್ವಾತಂತ್ರ್ಯದ 77 ವರ್ಷಗಳು ಸಂದ ಸಂದರ್ಭದ ಸವಿನೆನಪಿಗಾಗಿ ಧಾರವಾಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ದಾಖಲಿಸುವ ಉದ್ದೇಶದಿಂದ ಆರಂಭಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭವು ಜಿಲ್ಲಾಡಳಿತ, ಪದವಿಪೂರ್ವ ಶಿಕ್ಷಣ ಇಲಾಖೆ, ಧಾರವಾಡ ಜಿಲ್ಲಾ ಇತಿಹಾಸ ಉಪನ್ಯಾಸಕರ ಸಂಘ ಮತ್ತು ಅಣ್ಣಿಗೇರಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ನಗರದ ವಾಯ್.ಬಿ.ಅಣ್ಣಿಗೇರಿ ಪದವಿ ಪೂರ್ವಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಆಗಸ್ಟ್ 1 ರಿಂದ ಆಗಸ್ಟ್ 14 ರವರೆಗೆ ಆರಂಭಿಸಿದ್ದ 77 ಸರಣಿ ಉಪನ್ಯಾಸಗಳನ್ನು ನಿರಂತರವಾಗಿ ಜಿಲ್ಲೆಯ ಸರಕಾರಿ, ಅನುದಾನಿತ 77 ಕಾಲೇಜುಗಳಲ್ಲಿ ಸಂಘಟಿಸಲಾಗಿದೆ. 77 ಜನ ವಿದ್ವಾಂಸರು, ಸಂಶೋಧಕರು ಮತ್ತು ಪ್ರಾಧ್ಯಾಪಕರು ಜಿಲ್ಲೆಯ ಐತಿಹಾಸಿಕ ಘಟನೆಗಳ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಮಾರಂಭವನ್ನು ಉದ್ಘಾಟಿಸುವರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಪಿ.ಸುರೇಶ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉಪನ್ಯಾಸ ಮಾಲಿಕೆ ಜಿಲ್ಲಾ ನೋಡಲ್
ಅಶೋಕ ಸವಣೂರ ಅವರು ಅತಿಥಿಗಳಾಗಿಭಾಗವಹಿಸುವರು.
ಅಣ್ಣಿಗೇರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ನಾಗೇಶ ಅಣ್ಣಿಗೇರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಇತಿಹಾಸ ಉಪನ್ಯಾಸಕರ ಸಂಘದ ಅಧ್ಯಕ್ಷ ಉದಯ ನಾಯಕ ಅವರು ವಿಶೇಷ ಉಪನ್ಯಾಸ ನೀಡುವರು. ಇತಿಹಾಸಿಕ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಪ್ರಕಾಶ ನಿ.ಸುಣಗಾರ ಉಪಸ್ಥಿತರಿರುವರು.
ವೀರೇಶ್ವರಿ ಹೀರೆಮಠ ಹಾಗೂ ತಂಡದವರು ದೇಶ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸುವರು ಎಂದು ವಾಯ್.ಬಿ.ಅಣ್ಣಿಗೇರಿ ಕಾಲೇಜು ಪ್ರಾಚಾರ್ಯ ಪ್ರೊ. ಮಹಾಬಲೆಶ್ವರಯ್ಯ ಕೆಂಭಾವಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದೆ.