ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್ ಗಳು ಕಠಿಣ ಪರಿಸ್ಥಿಯಲ್ಲಿ ಕಾರ್ಯನಿರ್ವಹಿಸಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ತಿಳಿಸಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೌಕರರ ಭವನದ ಬಸವ ಸಭಾಂಗಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ ಪ್ರಯುಕ್ತ ಇಂಜಿನಿಯರ್ ದಿನಾಚರಣೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಭಿಯಂತರರು ಕಠಿಣ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಿ ಅವಿರತ ಸೇವೆ ಸಲ್ಲಿಸುತ್ತೀದ್ದೀರಾ. ರಾಷ್ಟ್ರ, ದೇಶ ಕಟ್ಟಲು ಅಭಿಯಂತರರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆಡಳಿತದ ಜೊತೆ ಇಂಜಿನಿಯರ್ ಗಳು ಕೈ ಜೋಡಿಸಿದರೆ ಉತ್ತಮ ನಾಡು ಕಟ್ಟಲು ಸಾಧ್ಯವಾಗುತ್ತದೆ ಎಮದು ಹೇಳಿದರು.
ಸರ್.ಎಂ ವಿಶ್ವೇಶ್ವರಯ್ಯ ರವರು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಿದ್ದು, ಅವರ ಸಾಕಷ್ಟು ಕೆಲಸಗಳು ಇಂದಿಗೂ ಶಾಶ್ವತವಾಗಿ ಉಳಿದಿವೆ. ರಾಜ್ಯ ಶ್ರೀಮಂತಗೊಳಿಸಲು ರಾಜರು ಹಾಗೂ ವಿಶ್ವೇಶ್ವರಯ್ಯ ರವರು ನೀಡಿರುವ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು.
ಸರ್.ಎಂ.ವಿಶ್ವೇಶ್ವರಯ್ಯರವರ ಸ್ಮರಣೆಯ ಅಂಗವಾಗಿ ಇಂದು ಸಾಧಕ ಇಂಜನಿಯರ್ ಗಳಿಗೆ ಸನ್ಮಾನ ಮಾಡಲಾಗಿದೆ. ಇಂಜಿನಿಯರ್ ಗಳು ಮಾತ್ರವಲ್ಲದೆ ಪೌರಕಾರ್ಮಿಕರು, ವೈದ್ಯರು ಸೇರಿದಂತೆ ಇನ್ನಿತರೆ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರನ್ನು ನಾವು ಸ್ಮರಿಸಬೇಕು. ಎಲ್ಲಾ ವಲಯಗಳು ಒಟ್ಟುಗೂಡಿ ಕೆಲಸ ಮಾಡಿದರೆ ಮಾತ್ರ ಹೆಚ್ಚು ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಶ್ರೀ ಅಮೃತ್ ರಾಜ್ ರವರು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಈ ಕೆಳಕಂಡ ಅಭಿಯಂತರರಿಗೆ ಪ್ರಶಸ್ತಿ ನೀಡಲಾಯಿತು.
ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪಡೆದವರ ವಿವರ:
1. ಶ್ರೀಮತಿ ಸುಗುಣ, ಮುಖ್ಯ ಅಭಿಯಂತರರು(ಪೂರ್ವ ವಲಯ)
2. ಬಸವರಾಜ್ ಆರ್. ಕಬಾಡೆ, ಮುಖ್ಯ ಪ್ರಧಾನ ವ್ಯವಸ್ಥಾಪಕರು(ಬಿ.ಎಸ್.ಡಬ್ಲ್ಯೂ.ಎಂ.ಎಲ್)
3. ಹೆಚ್.ಎಸ್. ಮಹದೇಶ್, ಅಧೀಕ್ಷಕ ಅಭಿಯಂತರರು.
4. ರೂಪೇಶ್, ಕಾರ್ಯಪಾಲಕ ಅಭಿಯಂತರರು.
5. ಮುನಿರೆಡ್ಡಿ, ಕಾರ್ಯಪಾಲಕ ಅಭಿಯಂತರರು.
6. ಎಲ್ ವೆಂಕಟೇಶ್, ಕಾರ್ಯಪಾಲಕ ಅಭಿಯಂತರರು(ಕೆರೆಗಳು)
7. ರಾಮಚಂದ್ರಪ್ಪ ಹೆಚ್.ಎಸ್., ಕಾರ್ಯಪಾಲಕ ಅಭಿಯಂತರರು(ಜೆಡಿಟಿಪಿ, ದಕ್ಷಿಣ ವಲಯ)
8. ರಾಜಣ್ಣ, ಕಾರ್ಯಪಾಲಕ ಅಭಿಯಂತರರು(ಟಿವಿಸಿಸಿ)
9. ಬಿ. ಶರತ್, ಕಾರ್ಯಪಾಲಕ ಅಭಿಯಂತರರು(ಎಂಪಿಇಡಿ)
10. ಬಿ.ಎನ್.ಪ್ರದೀಪ್, ಕಾರ್ಯಪಾಲಕ ಅಭಿಯಂತರರು.
11. ಶ್ರೀಮತಿ ಅಶಾ, ಕಾರ್ಯಪಾಲಕ ಅಭಿಯಂತರರು.
12. ಚಂದ್ರಶೇಖರ್ ನಾಯಕ್, ಸಹಾಯಕ ಅಭಿಯಂತರರು(ಟಿಡಿಆರ್)
ಈ ವೇಳೆ ವಿಶೇಷ ಆಯುಕ್ತರುಗಳಾದ ಡಾ. ಕೆ.ಹರೀಶ್ ಕುಮಾರ್, ಅವಿನಾಶ್ ಮೆನನ್‌ರಾಜೇಂದ್ರನ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪ್ರಧಾನ ಅಭಿಯಂತರಾದ ಬಿ.ಎಸ್. ಪ್ರಹ್ಲಾದ್, ಮುಖ್ಯ ಅಭಿಯಂತರರು, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.