ಸಹಾಯ 2.0 ಮೂಲಕ ನಾಗರೀಕರ ದೂರುಗಳಿಗೆ ತ್ವರಿತ ಸ್ಪಂದನೆ

0
387
Share this Article
5
(2)
Views: 132

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯ 2.0 ತಂತ್ರಾಂಶದ ಮೂಲಕ ಬರುವ ದೂರುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡಲಾಗುತ್ತಿದೆ. ಈ ಸಂಬಂಧ 1ನೇ ಜನವರಿ 2023 ರಿಂದ 3ನೇ ಸೆಪ್ಟೆಂಬರ್ 2024 ರವರೆಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಲಯವಾರು ಬಂದಿರುವ ದೂರುಗಳು(237359), ಇತ್ಯರ್ಥಪಡಿಸಲಾದ ದೂರುಗಳು(224933), ಬಾಕಿಯಿರುವ ದೂರುಗಳು(6875) ಇದ್ದು, ಈ ಪೈಕಿ 3987 ದೂರುಗಳು ಇತ್ಯರ್ಥ ಪಡಿಸುವ ಕಾರ್ಯ ಪ್ರಕ್ರಿಯೆಯಲ್ಲಿದ್ದು, 2535 ಲಾಂಗ್ ಟರ್ಮ್ ಸೆಲ್ಯೂಷನ್(LTS) ಆಗಿರುತ್ತದೆ‌. ಸದರಿ ಮಾಹಿಯನ್ನು ನೀಡಲಾಗಿದೆ.

 

ಪಾಲಿಕೆಗ ಸಹಾಯವಾಣಿ ಸಂಖ್ಯೆಯಾದ 1533 ಸಹಾಯವಾಣಿ ಸಂಖ್ಯೆ ಹಾಗೂ ಕೆಳ ಕಾಣಿಸುವ 2 ತಂತ್ರಾಂಶ ಹಾಗೂ ವೆಬ್ ಸೈಟ್ ಮೂಲಕ ನಾಗರೀಕರು ದೂರುಗಳನ್ನು ನೀಡಬಹುದಾಗಿದೆ. ಸದರಿ ದೂರುಗಳನ್ನು ಇಂಟಿಗ್ರೇಟ್ ಕಮಾಂಡ್ ಕಂಟ್ರೋಲ್ ಸೆಂಟರ್(ICCC) ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಕಾಲಮಿತಿಯೊಳಗಾಗಿ ಇತ್ಯರ್ಥ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.

 

ಪಾಲಿಕೆ ಸಹಾಯವಾಣಿ ಸಂಖ್ಯೆ: 1533

Namma Bangalore(Sahaaya app): https://play.google.com/store/apps/details?id=com.nammabengaluru.org

Smart Bengaluru app: https://play.google.com/store/apps/details?id=com.benscl.onecityoneapp

Website: https://bbmp.gov.in/home

https://www.smartoneblr.com/Index.htm

 

How useful was this post?

Click on a star to rate it!

Average rating 5 / 5. Vote count: 2

No votes so far! Be the first to rate this post.