ಸೋತರು ನಿಲ್ಲದ ಕೊಡುಗೈ ದಾನಿ ಪುಟ್ಟು ಆಂಜಿನಪ್ಪ ಅವರ ಸಮಾಜ ಸೇವೆ

0
48
Share this Article
0
(0)
Views: 5

ಶಿಡ್ಲಘಟ್ಟ: ತಾಲೂಕಿನ ಗೊರಮಡಗು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಗಂಗಾಭವಾನಿ ದೇವಾಲಯಕ್ಕೆ ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡರು ಪುಟ್ಟು ಆಂಜಿನಪ್ಪ. ಭೇಟಿ ನೀಡಿ ಜೀರ್ಣೋದ್ಧಾರಕ್ಕೆ ಎರಡು ಲಕ್ಷ ಚೇಕ್ ಅನ್ನು ವಿತರಿಸಿದರು.

 ಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಮಡಗು ಗ್ರಾಮಕ್ಕೆ ಈ ಹಿಂದೆ ಅಕ್ಟೊಬರ್ ಎರಡು ಗಾಂಧಿ ಜಯಂತಿಯಂದು ಬಂದಿದ್ದ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಆಂಜಿನಪ್ಪ ಅವರನ್ನ ಭೇಟಿ ಮಾಡಿ ದೇವಾಲಯದ ಅಭಿವೃದ್ಧಿಗಾಗಿ ಸಹಾಯ ಮಾಡುವಂತೆ ಕೋರಿದ್ದರು. ಅಂದೇ ನಾನು ಎರಡು ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆಯನ್ನು ನೀಡಿದ್ದರು ಈ ಹಿನ್ನೆಲೆಯಲ್ಲಿ ಕೊಟ್ಟ ಮಾತಿನಂತೆ ಟ್ರಸ್ಟ್ ಮುಖಂಡರಿಗೆ ಎರಡು ಲಕ್ಷ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ದ್ರಾಕ್ಷಿ ಬೆಳೆದು ಜೀವನ ಕಟ್ಟಿಕೊಂಡಿರುವ ಎರಡು ಜಿಲ್ಲೆಗಳಲ್ಲಿ ಹೆಚ್ಚು ಇರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ, ದ್ರಾಕ್ಷಿ ಕಟಿಂಗ್ ಮಾಡುವ ಕಾರ್ಮಿಕ ವರ್ಗ ನಮ್ಮ ತಾಲೂಕಿನಲ್ಲಿ ಹೆಚ್ಚಾಗಿ ಗೊರಮಡುಗು ಗ್ರಾಮದಲ್ಲಿ ಗುರುತಿಸಿಕೊಂಡಿದ್ದು, ಅದನ್ನೇ ಜೀವನೋಪಾಯವನ್ನಾಗಿ ಆಯ್ಕೆ ಮಾಡಿಕೊಂಡಿರುವಂತಹದ್ದು, ಹೆಚ್ಚು ಕೆಲಸ ಮಾಡಿ ಶ್ರಮಜೀವಿಗಳು ಎಂದು ಭಾವಿಸಬಹುದು. ಇಂತಹ ಹಳ್ಳಿಗಳ ಮೇಲೆ ನಮಗೂ ಆಸಕ್ತಿ, ಅಭಿಮಾನ, ಪ್ರೀತಿ,ಅವರ ಜೀವನಮಟ್ಟ ಸುಧಾರಿಸಬೇಕು ಮುಖ್ಯ ವಾಹಿನಿಗೆ ಬರಬೇಕೆನ್ನುವುದು ನಮ್ಮ ಒಂದು ದೃಷ್ಟಿಕೋನ, ಆ ನಿಟ್ಟಿನಲ್ಲಿ ಇದೇ ಗ್ರಾಮದಲ್ಲಿ ಗಂಗಮ್ಮ ದೇವಸ್ಥಾನವನ್ನು ಮುಖ್ಯ ಭಾಗದಲ್ಲಿ ನಿರ್ಮಿಸುತ್ತಿದ್ದು, ಅದಕ್ಕೆ ಆರ್ಥಿಕ ಶಕ್ತಿ ಕ್ರೂಢೀಕರಿಸುವಂತದ್ದು ಆಗಿದೆ. ಗಂಗಮ್ಮ ದೇವಾಲಯದ ಟ್ರಸ್ಟಿಗೆ ಎರಡು ಲಕ್ಷ ಚೆಕ್ ಹಸ್ತಾಂತರ ಮಾಡುತ್ತಿದ್ದೇನೆ. ಈ ಗ್ರಾಮಕ್ಕೆ ಅಭಿವೃದ್ಧಿ ಅಂತ ಬಂದರೆ ಒಂದು ಹೆಜ್ಜೆ ಮುಂದೆ ಇದ್ದು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇತ್ತೀಚೆಗೆ ಸುರಿದ ಧಾರ ಕಾರ ಮಳೆಗೆ ಮನೆ ಬಿದ್ದು ಸಂಕಷ್ಟದಲ್ಲಿ ಸಿಲುಕಿದ್ದ ವೆಂಕಟಮ್ಮ ಎಂಬ ವೃದ್ದೆಯ ಮನೆಗೆ ಭೇಟಿ ನೀಡಿ ಇಪ್ಪತ್ತೈದು ಸಾವಿರ ನಗದು ಹಣ ಸಹಾಯಮಾಡಿ ಸಾಂತ್ವಾನ ಹೇಳಿದರು. ಜೊತೆಗೆ ನಕುಲ್ ಎಂಬುವವರು ಅಪಘಾತಕಿಡಾಗಿದ್ದರು ಅವರನ್ನು ಭೇಟಿ ಮಾಡಿ ಸಹಾಯ ಧನವನ್ನು ನೀಡಿದರು. ಅಂಗವೈಕಲ್ಯದಿಂದ ನರುಳುತ್ತಿದ್ದ ಮಣಿ ಮತ್ತು ನವೀನ್ ಎಂಬ ಯುವಕರಿಗೆ ಆರ್ಥಿಕ ಸಹಾಯವನ್ನು ಮಾಡುವ ಮೂಲಕ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ತುಮ್ಮನಹಳ್ಳಿ ವೆಂಕಟೇಶ್,ಶೀಗಹಳ್ಳಿ ಬಸವರಾಜ್,ಹುಜೂಗೂರು ಬಚ್ಚೆಗೌಡ,ಮಾರುತಿ,ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾರ್ವತಮ್ಮ ಶ್ರೀನಿವಾಸ್,ಮಾಜಿ ಅಧ್ಯಕ್ಷ ಮಂಜುನಾಥ್,ಕುಪ್ಪೇನಹಳ್ಳಿ ರವಿ,ಮುನಿವೀರಪ್ಪ,ರಾಜ್ ಕುಮಾರ್,ವರದರಾಜ್,ದೊಡ್ಡದಾಸರಹಳ್ಳಿ ದೇವರಾಜ್,ಡೀಶ್ ಮಂಜುನಾಥ್, ವಾರ್ ಹುಣಸೆಹಳ್ಳಿ ಮಂಜು, ಮತ್ತು ಟ್ರಸ್ಟ್ ಪದಾಧಿಕಾರಿಗಳು ನಾರಾಯಣಸ್ವಾಮಿ , ನರಸಿಂಹ,ದೇವಪ್ಪ, ಲೋಕೇಶ್,ನಾರಾಯಣಸ್ವಾಮಿ,ಕಾಕೆಪ್ಪ, ವೆಂಕಟರೋಣಪ್ಪ,ರಾಮಕೃಷ್ಣ, ನಾರಾಯಣಸ್ವಾಮಿ, ಸತ್ಯನಾರಾಯಣ,ಹಾಗೂ ಗ್ರಾಮಸ್ಥರು ಹಾಜರಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here