22 ಕೋಟಿ ರೂ. ತೆರಿಗೆ ಸಂಗ್ರಹ

0
55
Share this Article
0
(0)
Views: 0

 

ಡಾ. ದಾಕ್ಷಯಿಣಿ,ಜಂಟಿ ಆಯುಕ್ತರು(ಮಹದೇವಪುರ ವಲಯ)ರವರ ನೇತೃತ್ವದಲ್ಲಿ ಒಂದು ಬಾರಿ ಪರಿಹಾರ ಯೋಜನೆ (OTS) ಯಡಿ 22 ಕೋಟಿ ರೂ. ತೆರಿಗೆ ಸಂಗ್ರಹ:

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮೆ.ಸ್ಯಾಪ್ ಲ್ಯಾಬ್ ಇಂಡಿಯಾ ಪ್ರೈವೇಟ್ ಲಿ. ಸಂಸ್ಥೆಯಿಂದ ವಲಯ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ* ರವರ ನೇತೃತ್ವದಲ್ಲಿ ಇಂದು ಒಂದು ಬಾರಿ ಪರಿಹಾರ ಯೋಜನೆ(One Time Settlement – OTS)ಯಡಿ 22 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದೆ. 

ಮಹದೇವಪುರ ವಲಯದ ಗರುಡಾಚಾರ್ ಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸ್ವತ್ತಿನ ಸಂಖ್ಯೆ 138, 138ಪಿ, ಇ.ಪಿ.ಐ.ಪಿ ಕೈಗಾರಿಕಾ ಪ್ರದೇಶದಲ್ಲಿರುವ ಮೆ. ಸ್ಯಾಪ್ ಲ್ಯಾಬ್ 2008-09 ರಿಂದ 2023-24ರವರೆಗೆ ತಪ್ಪಾದ ವರ್ಗ ಮತ್ತು ಕಡಿಮೆ ಕಡಿಮೆ ದರದಡಿಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿದ್ದರು. ಈ ಸಂಬಂಧ ಸರಿಯಾದ ವರ್ಗದ ಪ್ರಕಾರ ಆಸ್ತಿ ತೆರಿಗೆಯನ್ನು ಒಂದು ಬಾರಿ ಪರಿಹಾರ ಯೋಜನೆಯಡಿ ಪಾಲಿಕೆಗೆ ಪಾವತಿಸಲು ಸಂಸ್ಥೆಗೆ ತಿಳುವಳಿಕೆ ಪತ್ರ ನೀಡಲಾಗುತ್ತು. ಅದರಂತೆ, ಇಂದು ಪಾಲಿಕೆಗೆ ಪಾವತಿಸಬೇಕಿದ್ದ 22 ಕೋಟಿ ರೂ.(22,00,13,386/-) ಆಸ್ತಿ ತೆರಿಗೆಯನ್ನು ಒಂದು ಬಾರಿ ಪರಿಹಾರ ಯೋಜನೆಯಡಿ ಡಿಡಿ ಮೂಲಕ ನೀಡಿರುತ್ತಾರೆ.

ಈ ವೇಳೆ ವಲಯ ಉಪ ಆಯುಕ್ತರಾದ ಎಸ್.ಬಿ ಮಧು, ಕಂದಾಯ ಪರಿವೀಕ್ಷಕರಾದ ಶಿವದರ್ಶನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here