CSR ಮತ್ತು Adoption ಪಾಲಿಸಿಗಳಡಿಯಲ್ಲಿ ಆಸಕ್ತ ಗುಂಪುಗಳಿಂದ ನೊಂದಾಯಿಸಲು ಅವಕಾಶ – ವಿಶೇಷ ಆಯುಕ್ತರು

0
92
Share this Article
0
(0)
Views: 0

ಉದ್ಯಾನವನಗಳು, ರಸ್ತೆ ವಿಭಜಕಗಳು ಮತ್ತು ವೃತ್ತಗಳನ್ನು ಆಸಕ್ತ ಖಾಸಗಿ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳಿಗೆ ದತ್ತು ಪಡೆದುಕೊಳ್ಳಲು ನೊಂದಾಯಿಸುವ ಕುರಿತು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಮ್ಮ ಬೆಂಗಳೂರು ನಮ್ಮ ಕೊಡುಗೆ ಯೋಜನೆಯಡಿಯಲ್ಲಿ ಸಿ.ಎಸ್.ಆರ್ ಪಾಲಿಸಿ ಮತ್ತು ಅಡಾಪ್ಟನ್ ಪಾಲಿಸಿಗಳಡಿಯಲ್ಲಿ ಉದ್ಯಾನವನಗಳು, ರಸ್ತೆ ವಿಭಜಕಗಳು ಮತ್ತು ವೃತ್ತಗಳನ್ನು ಆಸಕ್ತ ಖಾಸಗಿ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳಿಗೆ ದತ್ತು ಪಡೆದುಕೊಳ್ಳಲು ನೊಂದಾಯಿಸಿಕೊಳ್ಳಬಹುದಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1270 ಉದ್ಯಾನವನಗಳನ್ನು ಪಾಲಿಕೆ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದ್ದು, ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವೃತ್ತ ಮತ್ತು ಮೀಡಿಯ್‌ನ್ಸ್‌ಗಳನ್ನು ಸಹ ನಿರ್ವಹಣೆ ಮಾಡಲಾಗುತ್ತಿದೆ.

ಮುಂದುವರೆದು, ಇತ್ತೀಚೆಗೆ ಹಲವಾರು ನಾಗರೀಕರ ಗುಂಪುಗಳು (Citizens Group) ಮತ್ತು ಸರ್ಕಾರೇತರ ಸಂಸ್ಥೆಗಳು ಪಾಲಿಕೆಯನ್ನು ಸಂರ್ಪಕಿಸಿ ಉದ್ಯಾನವನಗಳ/ವೃತ್ತಗಳ/ಮೀಡಿಯ್‌ನ್ಸ್‌ಗಳ ನಿರ್ವಹಣೆ/ಅಭಿವೃದ್ಧಿಯನ್ನು ಮಾಡಲು ಆಸಕ್ತರಾಗಿರುತ್ತಾರೆ. ಆಸಕ್ತ ಸಂಸ್ಥೆಗಳಿಗೆ Community involvement for Park Conservation Policy CIPC- 2024, CSR ಅಡಿಯಲ್ಲಿ ಹಾಗೂ ನಮ್ಮ ಬೆಂಗಳೂರು – ನನ್ನ ಕೊಡುಗೆ ಅಡಿಯಲ್ಲಿ ಆಸಕ್ತ ಸಂಸ್ಥೆಗಳಿಗೆ ದತ್ತು ಪಡೆಯಬಹುದಾಗಿದೆ.

ದತ್ತು ನೀಡುವ ಉದ್ದೇಶ:

ಉದ್ಯಾನವನಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಆಸಕ್ತ ಗುಂಪುಗಳಿಂದ ಸೇವೆ ಮತ್ತು ಸೌಲಭ್ಯವನ್ನು ಪಡೆಯುವ ಉದ್ದೇಶದಿಂದ

ನೊಂದಾಣಿ ಮಾಡಿಕೊಳ್ಳುವ ವಿಧಾನ:

ಪಾಲಿಕೆಯ ಅಧಿಕೃತ ವೆಬ್ ಸೈಟ್ ಆದ https://www.bbmp.gov.in ಆನ್ ಲೈನ್ ವೆಬ್ ಸೈಟ್ ಮೂಲಕ ಮಾತ್ರ (ದಿನಾಂಕ 18.06.2024 ರಿಂದ ಪಾಲಿಕೆ ವೆಬ್‌ಸೈಟ್‌ನಲ್ಲಿ ನೋಂದಾಣಿಗೆ ಅವಕಾಶ ಕಲ್ಪಿಸಲಾಗಿದೆ). ದತ್ತು ಪಡೆಯಲು ಷರತ್ತುಗಳು ಸದರಿ ವೆಬ್ ಸೈಟ್ ನಲ್ಲಿಯೇ ನೋಡಬಹುದಾಗಿದೆ.

ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ:

29-06-2024 ಸಂಜೆ 5:00 ಒಳಗಡೆ, ಉಪ ನಿರ್ದೇಶಕರು ತೋಟಗಾರಿಕೆ ರವರ ಕಛೇರಿ, ಅನೆಕ್ಸ್-03 ಕಟ್ಟಡ ನೆಲಮಹಡಿ, ಕೊಠಡಿ ಸಂಖ್ಯೆ 09, ಬಿಬಿಎಂಪಿ ಕೇಂದ್ರ ಕಛೇರಿಗೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ. ದೂರವಾಣಿ ಸಂಖ್ಯೆ 9535015189ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು *ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಣೆಯ ವಿಶೇಷ ಆಯುಕ್ತರಾದ ಶ್ರೀಮತಿ ಪ್ರೀತಿ ಗೆಹ್ಲೋಟ್* ರವರು ಸಾರ್ವಜನಿಕ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ‌.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here