2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ತೆರೆಬಿದ್ದಿದೆ. ಐಪಿಎಲ್ ವಿಶ್ವದಲ್ಲೇ ಆತ್ಯಂತ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಆಗಿದೆ. ಭಾನುವಾರ ಚೆನ್ನೈನ ಎಂಎನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿದೆ. ಐಪಿಎಲ್‌ನಲ್ಲಿ ಮೂರನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಕೆಕೆಆರ್ ತಂಡದ ಫೋಟೋ ಸೆಷನ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಲ್ಲದೆ ಟ್ರೋಫಿ ಮೇಲೆ ಬರೆದಿರುವ ಸಾಲು, ಇದರ ಬೆಲೆ, ತೂಕ ಎಷ್ಟು ಎಂಬುದರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಆತುರಿಸುತ್ತಿದ್ದಾರೆ.
ಐಪಿಎಲ್ ಟ್ರೋಫಿ ಹೇಗೆ ತಯಾರಿಸಲಾಗಿದೆ?
ಈ ಋತುವಿನಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದ ಕೆಕೆಆರ್ ತಂಡವು 20 ಕೋಟಿ ರೂ.ಗಳನ್ನು ನಗದು ಬಹುಮಾನವಾಗಿ ಪಡೆದಿದೆ. ಕೆಕೆಆರ್ ಸ್ವೀಕರಿಸಿದ ನಕ್ಷತ್ರದಂತೆ ಮಿನುಗುತ್ತಿರುವ ಟ್ರೋಫಿಯನ್ನು ಚಿನ್ನ ಮತ್ತು ಬೆಳ್ಳಿ ಮಿಶ್ರಣದಿಂದ ಮಾಡಲಾಗಿದೆ. ಬಿಸಿಸಿಐ ಈ ಟ್ರೋಫಿಯನ್ನು ಪ್ರಸಿದ್ಧ ಆಭರಣ ತಯಾರಿಕಾ ಕಂಪನಿಯಿಂದ ತಯಾರಿಸಿದೆ. ಜೊತೆಗೆ ಟ್ರೋಫಿ ಮೇಲೆ ವಿಜೇತ ತಂಡದ ಹೆಸರನ್ನು ಬರೆಯಲಾಗಿದ್ದು, ಇದರ ತೂಕ ಸುಮಾರು 6 ಕೆ.ಜಿ ರಷ್ಟಿದೆ.
ಟ್ರೋಫಿ ಮೇಲೆ ಬರೆದಿರುವುದು ಏನು?
ಐಪಿಎಲ್ ಟ್ರೋಫಿ ಮೇಲೆ ನಾಲ್ಕು ಪದಗಳನ್ನು ಬರೆಯಲಾಗಿದೆ. ಅದೂ ಕೂಡ ಸಂಸ್ಕೃತದಲ್ಲಿದೆ. ಆದರೆ ಈ ನಾಲ್ಕು ಪದಗಳು ಏನೆಂದು ಅನೇಕರಿಗೆ ತಿಳಿದಿಲ್ಲ. ಇಂಗ್ಲೆಂಡ್ ಆಟಗಾರರ ವಿರುದ್ಧ ಮೈಕೆಲ್ ವಾನ್ ಕಿಡಿ ‘ಯಾತ್ರಾ ಪ್ರತಿಭಾ ನಿವೃತ್ತಿ ಪ್ರಪನೋತಿತಿ’ ಎಂದು ಬರೆದಿರುವ ಸಂಸ್ಕೃತ ಪದಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ನೋಡಿದರೆ, ಇದರ ಅರ್ಥ, ‘ಪ್ರತಿಭಾ ಅವಕಾಶಗಳನ್ನು ಬಳಸಿಕೊಳ್ಳುವ ವೇದಿಕೆ’. ಅಂದರೆ, ಯುವಕರು ತಮ್ಮ ಪ್ರತಿಭೆಯನ್ನು ತೋರಿಸಲು ಐಪಿಎಲ್ ಒಂದು ವೇದಿಕೆಯಾಗಿದೆ.
ವಿಶ್ವಕಪ್ ಟ್ರೋಫಿಯ ಬೆಲೆ ಎಷ್ಟು?
ಐಪಿಎಲ್ ಟ್ರೋಫಿಯ ಬೆಲೆಯನ್ನು ಬಿಸಿಸಿಐ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಆದರೆ, ಕ್ರಿಕೆಟ್ ಮೂಲಗಳ ಪ್ರಕಾರ ಸುಮಾರು 50 ಲಕ್ಷ ರೂ. ಎಂದು ಹೇಳಲಾಗಿದೆ. ಮತ್ತೊಂದು ವಿಶೇಷನೆಂದರೆ ಐಪಿಎಲ್ ಟ್ರೋಫಿಯನ್ನು ವಿಶ್ವಕಪ್ ಗಿಂತ ಹೆಚ್ಚು ದುಬಾರಿ ಎಂದು ಪರಿಗಣಿಸಲಾಗಿದೆ. ಏಕದಿನ ವಿಶ್ವಕಪ್ ಟ್ರೋಫಿಯ ಅಂದಾಜು ಬೆಲೆ ಸುಮಾರು 24 ಲಕ್ಷ ರೂ.ಕ್ಕಿಂತ ಹೆಚ್ಚಿದೆ. ಈ ಟ್ರೋಪಿಯನ್ನು ಕಳೆದ ವರ್ಷ 2023ರಲ್ಲಿ ಟೀಮ್ ಇಂಡಿಯಾ ವಿರುದ್ಧ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ನೀಡಲಾಗಿದೆ