ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ 853 ಶಿಫಾರಸ್ಸು ಅನುಷ್ಠಾನ – ಆರ್.ವಿ.ದೇಶಪಾಂಡೆ

0
293
Share this Article
0
(0)
Views: 245

ಬೆಂಗಳೂರು, ಸೆಪ್ಟೆಬಂರ್, 30

ಕರ್ನಾಟಕ ಆಡಳಿತ ಸುಧಾರಣಾ ಆಯೋಗ 2024 ರ ಜನವರಿಯಿಂದ ಈವರೆಗೆ 19 ಇಲಾಖೆಗಳ 853 ಶಿಪಾರಸ್ಸುಗಳನ್ನು ಅನುಷ್ಠಾನಗೊಳಿಸಿದೆ ಎಂದು ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ತಿಳಿಸಿದರು.

ಇಂದು ವಿಕಾಸಸೌಧದಲ್ಲಿ ಆಯೋಗದ ಪ್ರಗತಿ ಕುರಿತ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಟ್ಟು 19 ಇಲಾಖೆಗಳ 2891 ಶಿಫಾರಸ್ಸುಗಳ ಪೈಕಿ, 853 ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲಾಗಿದೆ. ಇನ್ನು ಅನುಷ್ಠಾನದ ಹಂತದಲ್ಲಿ 592 ಶಿಫಾರಸುಗಳಿದ್ದು, ಸರ್ಕಾರದ ಮಟ್ಟದಲ್ಲಿ 243, ಇಲಾಖಾ ಮಟ್ಟದಲ್ಲಿ 1181 ಶಿಫಾರಸ್ಸುಗಳು ಬಾಕಿ ಇವೆ ಎಂದು ವಿವರ ನೀಡಿದರು.

2024ರ ಜನವರಿ ಅಂತ್ಯದ ವೇಳೆಗೆ ಆಯೋಗ 39 ಇಲಾಖೆಗಳನ್ನು ಒಳಗೊಂಡು ಒಟ್ಟು ಏಳು ವರದಿಗಳನ್ನು ಸರ್ಕಾರಗಳಿಗೆ ನೀಡಿದೆ. ಈ ವರದಿಗಳು 5039 ಶಿಫಾರಸುಗಳನ್ನು ಒಳಗೊಂಡಿತು. ಜನವರಿ ಅಂತ್ಯದವರೆಗೆ ಕೇವಲ 99 ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ನಿರಂತರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಇತರರಿಗೆ ನಿರಂತರವಾಗಿ ಪತ್ರ ಬರೆದು ಹೆಚ್ಚು ಶಿಫಾರಸ್ಸುಗಳನ್ನು ತಾವು ಅನುಷ್ಠಾನಗೊಳಿಸಿರುವುದಾಗಿ ತಿಳಿಸಿದರು.

ಅಲ್ಲದೆ 20 ಇಲಾಖೆಗಳಿಗೆ ಸಂಬಂಧಿಸಿದ 2168 ಶಿಫಾರಸುಗಳ ಪೈಕಿ 12 ನ್ನು ಅನುಷ್ಠ್ಠಾನಗೊಳಿಸಲಾಗಿದೆ. ಅನುಷ್ಠಾನದ ಹಂತದಲ್ಲಿ 993 ಬಾಕಿಯಿದ್ದು 192 ಶಿಫಾರಸ್ಸುಗಳು ಸರ್ಕಾರದ ಮಟ್ಟದಲ್ಲಿ 1771 ಇಲಾಖಾ ಮಟ್ಟದಲ್ಲ ಬಾಕಿ ಇವೆ. ಬಾಕಿ ಉಳಿದ ಶಿಫಾರಸುಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದರು.

ಆಯೋಗ ಉತ್ತರ ಕನ್ನಡ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿದ್ದು, ವಿವಿಧ ಇಲಾಖೆಗಳಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ನಾಗರೀಕರ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂದರು.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಮಾನದಂಡವನ್ನು ಪರಿಶೀಲಿಸಿ, ಅರ್ಹರಿಗೆ ಕಾರ್ಡ್ ನೀಡಿ, ಅನರ್ಹ ಕಾರ್ಡ್‍ಗಳನ್ನು ರದ್ದುಗೊಳಿಸಲು ಉಪಸಮಿತಿ ರಚಿಸಲಾಗಿದೆ. ಇದಲ್ಲದೆ ಇಲಾಖೆಗಳು ನಿಗಮ ಮಂಡಳಿಗಳನ್ನು ವಿಲೀನಗೊಳಿಸಲು ಪರಿಶೀಲಿಸಲಾಗುವುದು. ಸರ್ಕಾರಿ ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ಯಾವುದೇ ಲೋಪ ವಿಳಂಬಕ್ಕೆ ಆಸ್ಪದ ನೀಡದಂತೆ ಆಯೋಗ ಕ್ರಮಕೈಗೊಳ್ಳಬೇಕು ಎಂದರು.

ನಗದು ರಹಿತ, ಸಂಪರ್ಕ ರಹಿತ ಸೇವೆ ನೀಡಲು ಎಲ್ಲಾ ಸೇವೆಗಳನ್ನು ಆನ್‍ಲೈನ್, ಎಂಡ್- ಟು – ಎಂಡ್ ಆನ್‍ಲೈನ್ ಸೇವೆಗಳು ಮತ್ತು ತಂತ್ರಜ್ಞಾನ ಬಳಸಿಕೊಂಡು ಕಡತವನ್ನು ತ್ವರಿತ ವಿಲೇವಾರಿ ಮಾಡಲು ಸೂಚಿಸಲಾಗುವುದು. ಅಟಲ್‍ಜೀ ಜನಸ್ನೇಹಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮುಂತಾದ ಕಚೇರಿಗಳ ಸೇವಾ ವೈಖರಿ ಬಲಪಡಿಸಲು ಶಿಫಾರಸ್ಸು ಸೇರಿದಂತೆ ಸರ್ಕಾರಿ ಖಾಲಿ ಲಿಪಿಕ ಹುದ್ದೆಗಳನ್ನು ತಾಂತ್ರಿಕ ಹುದ್ದೆಗಳಿಗೆ ಪರಿವರ್ತಿಸುವ ಕಾರ್ಯವನ್ನು ಸಹ ಮಾಡಲಾಗಿದೆ ಎಂದರು.

ಒಟ್ಟಿನಲ್ಲಿ ಪಾರದರ್ಶಕತೆ, ಸರಳತೆ ಮತ್ತು ಕಡಿಮೆ ವೆಚ್ಚದಲ್ಲಿ ನಾಗರೀಕ ಸೇವೆಗಳನ್ನು ಸಕಾಲದಲ್ಲಿ ವಿಳಂಬವಿಲ್ಲದೇ ತಲುಪಿಸಲು ಆಯೋಗ ಬದ್ಧವಾಗುದೆ ಎಂದು ತಿಳಿಸಿದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here