ಶ್ರೀ ಭುವನೇಶ್ವರಿ ಎಂಟರ್ ಪ್ರೈಸಸ್ ಸಂಸ್ಥೆಯ ಮಾಲೀಕರಾದ ಶ್ರೀ ಎ.ವಿ.ಗಿರೀಶ್ ಗುತ್ತಿಗೆದಾರರು ಸರ್ಕಾರದ ಒಳಾಡಳಿತ ಇಲಾಖೆಗೆ ನಕಲಿ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ಅನ್ನು ನೀಡಿ ಪ್ರಸಾರ ಪರವಾನಗಿಯನ್ನು ಪಡೆದುಕೊಂಡಿರುವುದು ಹಾಗೆಯೇ ಸದರಿ ಪ್ರಸಾರ ಪರವಾನಗಿಯನನ್ಉ ಉಪಯೋಗಿಸಿಕೊಂಡು ಪಾಲಿಕೆಯ ಹಲವು ಟೆಂಡರ್ಗಳಲ್ಲಿ ಪಾಲ್ಗೊಂಡು ಕಾರ್ಯಾದೇಶಗಳು ಮತ್ತು ಬಿಲ್ಲುಗಳನ್ನು ಪಡೆದುಕೊಂಡಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ.
ಮುಂದುವರೆದು, ಪ್ರಸಾರ ಪರವಾನಗಿ ಪಡೆಯಲು ಸಲ್ಲಿಸಿರುವ ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೇಟ್ ನಕಲಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರವರ ವರದಿಯಂತೆ ದಿನಾಂಕ:15-06-2024ರಲ್ಲಿ ಸರ್ಕಾರದಿಂದ ಮಂಜೂರು ಮಾಡಿರುವ ಪ್ರಸಾರ ಪರವಾನಗಿ ಯನ್ನು ರದ್ದುಗೊಳಿಸಿ ಆದೇಶಿಸಲಾಗಿರುತ್ತದೆ.
ಮೇಲ್ಕಂಡ ಕಾರಣಗಳಿಂದ ಪಾಲಿಕೆಯ ದಕ್ಷಿಣ ಮತ್ತು ಪಶ್ಚಿಮ ವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರವರುಗಳು ಶ್ರೀ ಎ.ವಿ.ಗಿರಿಶ್, ಶ್ರೀ ಭುವನೇಶ್ವರಿ ಎಂಟರ್ ಪ್ರೈಸಸ್ ಸಂಸ್ಥೆ ರವರಿಗೆ ಕಾಮಗಾರಿ ನಿರ್ವಹಿಸಲು ನೀಡಲಾಗಿದ್ದ ಕಾರ್ಯಾದೇಶಗಳನ್ನು ರದ್ದುಗೊಳಿಸಿ ಆದೇಶಿಸಿರುತ್ತಾರೆ.
ಆದಕಾರಣ ದಿನಾಂಕ:30-07-2024ರಿಂದ ಜಾರಿಗೆ ಬರುವಂತೆ 03 (ಮೂರು) ವರ್ಷಗಳ ಅವಧಿಗೆ ಶ್ರೀ ಎ.ವಿ.ಗಿರೀಶ್, ಶ್ರೀ ಭುವನೇಶ್ವರಿ ಎಂಟರ್ ಪ್ರೈಸಸ್ ಸಂಸ್ಥೆಯ (ನಂ.294, 1ನೇ ಮೈನ್, 1ನೇ ಕ್ರಾಸ್, 11ನೇ ಬ್ಲಾಕ್, ನಾಗರಭಾವಿ, 2ನೇ ಹಂತ, ಬೆಂಗಳೂರು-560 072) ಗುತ್ತಿಗೆದಾರರನ್ನು ಡಿಬಾರ್ ಮಾಡಿ ಆದೇಶಿಸಲಾಗಿರುತ್ತದೆ.