ಚಾರ್‍ಧಾಮ್ ಯಾತ್ರೆಯ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಇಸ್ವಾಸ್ಥ್ಯಧಾಮ್ ವೆಬ್ ಅಪ್ಲಿಕೇಶನ್

0
31
Share this Article
0
(0)
Views: 0

ಬೆಂಗಳೂರು, ಜೂನ್ 03:

ಚಾರ್‍ಧಾಮ್ ಯಾತ್ರೆಯು ಈಗಾಗಲೇ ಆರಂಭಗೊಂಡಿದ್ದು, ಈ ಪವಿತ್ರ ಯಾತ್ರೆಯನ್ನು ಕೈಗೊಳ್ಳುವ ಲಕ್ಷಾಂತರ ಭಕ್ತರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಉತ್ತರಖಂಡ ಸರ್ಕಾರವು ಇ-ಸ್ವಾಸ್ಥ್ಯಧಮ್ ವೆಬ್‍ಆಫ್‍ನ್ನು ಪರಿಚಯಿಸಿದೆ. ಈ ವರ್ಷ ಪವಿತ್ರ ಚಾರ್‍ಧಾಮ್ ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಆರೋಗ್ಯ ರಕ್ಷಣೆ ಮತ್ತು ಮೇಲ್ವಿಚಾರಣೆ ವ್ಯವಸ್ಥೆಯನ್ನು ಹೆಚ್ಚಿಸುವ ಗುರಿಯನ್ನು ಉತ್ತರಖಂಡ ಸರ್ಕಾರವು ಹೊಂದಿದೆ.

ಪ್ರತಿಯೊಬ್ಬ ಯಾತ್ರಿಕನ ಬಗ್ಗೆ ತಿಳಿಯಲು ಇ-ಸ್ವಾಸ್ಥ್ಯಧಮ್ ವೆಬ್ ಅಪ್ಲಿಕೇಶನ್‍ನಲ್ಲಿ ನೋಂದಾಯಿಸುವುದು ಪ್ರಾಥಮಿಕ ಉದ್ದೇಶವಾಗಿದೆ.

ಯಾತ್ರಾರ್ಥಿಗಳಿಗೆ ಇಸ್ವಾಸ್ಥ್ಯ ಧಾಮ್ ವೆಬ್ ಅಪ್ಲಿಕೇಶನ್ ಮತ್ತು ಅದರ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯುವ ಸಂಬಂಧ ಸುದ್ದಿಪತ್ರಗಳು, ವೆಬ್‍ಸೈಟ್‍ಗಳು ಮತ್ತು ಸಾಮಾಜಿಕ ಮಾಧ್ಯಮಗಳಾದ ಎಕ್ಸ್, ಫೇಸ್‍ಬುಕ್, ಇನ್ಸ್ಟಾಗ್ರಾಂ, ಲಿಂಕ್ಡ್‍ಇನ್ ಖಾತೆಗಳಂತಹ ರಾಜ್ಯದ ಸಂವಹನ ಚಾನಲ್‍ಗಳನ್ನು ಬಳಸಿಕೊಳ್ಳಬಹುದು.

ರಾಜ್ಯದಲ್ಲಿ ಯಾತ್ರಾರ್ಥಿಗಳ ಹೆಚ್ಚಿನ ಗೋಚರತೆ, ಕಾಲ್ನಡಿಗೆಯ ಸ್ಥಳಗಳಾದ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಇತ್ಯಾದಿ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಅಳವಡಿಸಿರುವುದರಿಂದ ಚಾರ್ ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

 
 
 
 
 
 
 
 
 

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here