ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 2016 ರಿಂದ 2018 ರ ಅವಧಿಯ ಗ್ರಾಹಕ ವ್ಯಾಜ್ಯಗಳ ಕಡತಗಳು ನಾಶಕ್ಕೆ ಆದೇಶ

0
50
Share this Article
0
(0)
Views: 5
ಧಾರವಾಡ ಮೇ.29:
 
ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿರುವ ದೂರು ವಿಭಾಗದಿಂದ ಮುಕ್ತಾಯಗೊಂಡು,ರೆಕಾರ್ಡ್ ಶಾಖೆಗೆ ನೀಡಲಾದ 2016 ರಿಂದ 2018 ರ ವರೆಗಿನ ಕಡತಗಳನ್ನು ನಾಶಗೊಳಿಸಲು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
 
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ 2016 ರಿಂದ 2018 ರ ವರೆಗಿನ ಅಂತಿಮ ಆದೇಶದ ವಿರುದ್ಧ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಘನ ಉಚ್ಛ ನ್ಯಾಯಾಲಯ, ಭಾರತ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಯಾವುದಾದರೂ ಮೇಲ್ಮನವಿ ಅಥವಾ ರಿಟ್ ಅರ್ಜಿ, ಪುನರ್ ಪರಿಶೀಲನಾ ಅರ್ಜಿಗಳು ದಾಖಲಾಗಿದ್ದರೆ ಅಥವಾ ತಡೆಯಾಜ್ಞೆ ಇದ್ದರೆ ಆಯೋಗದ ಗಮನಕ್ಕೆ ತರಬಹುದಾಗಿದೆ. ಮತ್ತು ತಮ್ಮ ಕಡತಗಳಲ್ಲಿ ಸಲ್ಲಿಸಿರುವ ಮೂಲ ದಾಖಲೆಗಳು ತಮಗೆ ಅವಶ್ಯವಿದ್ದಲ್ಲಿ ಮೇ 28, 2024 ರಿಂದ ಜೂನ್ 29, 2024 ರವರೆಗೂ ತೆಗೆದುಕೊಂಡು ಹೋಗಬಹುದಾಗಿದೆ.
 
ತದ ನಂತರದ ತಮ್ಮ ಮೂಲ ದಾಖಲೆಗಳಿಗೆ ಆಯೋಗ ಜವ್ಬಾದಾರಿ ಹೊಂದಿರುವುದಿಲ್ಲ. ಜೂನ್ 30, 2024 ರ ನಂತರ ಕಡತಗಳನ್ನು ಕಡ್ಡಾಯವಾಗಿ ನಾಶಗೊಳಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here