ನಗರದ ನಾಗರೀಕರು ಹಾಗೂ ವಿದ್ಯಾರ್ಥಿಗಳೆ “ಡೆಂಘೀ ವಾರಿಯರ್ಸ್” ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಿಗೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ:
ನಗರದಲ್ಲಿ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆಯ ಆರೋಗ್ಯ ವಿಭಾಗವು ಜುಲೈ 2024 ರಲ್ಲಿ ನಾಗರೀಕರು ಹಾಗೂ ವಿದ್ಯಾರ್ಥಿಗಳಿಗೆ *“ಡೆಂಘೀ ವಾರಿಯರ್ಸ್”* ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು.
ಡೆಂಘೀ ನಿಯಂತ್ರಣಕ್ಕಾಗಿ ನಾಗರೀಕರು ಅಥವಾ ವಿದ್ಯಾರ್ಥಿಗಳು ತಮ್ಮ ಮನೆ(@nammahomes)ಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಯಾವ ರೀತಿ ಇತರರಿಗೆ ಅರಿವು ಮೂಡಿಸಲಾಗಿದೆ ಎಂಬುದರ ಕುರಿತು ಕಿರು ಚಿತ್ರಗಳನ್ನು ಮಾಡಿ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಟ್ ಮಾಡಿ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರ ಸಾಮಾಜಿಕ ಜಾಲತಾಣವಾದ *Facebook ಮತ್ತು Twitter ಖಾತೆ(@BBMPSplHealth)ಗೆ ಟ್ಯಾಗ್* ಮಾಡಲು ತಿಳಿಸಲಾಗಿತ್ತು. ಜೊತೆಗೆ ಗೂಗಲ್ ಡ್ರೈವ್ ಲಿಂಕ್ ಮೂಲಕ ನಾಗರೀಕರು ಹಾಗೂ ವಿದ್ಯಾರ್ಥಿಗಳು ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಸೂಚಿಸಲಾಗಿತ್ತು.
ಸೆ. 17 ರಂದು ಕಾರ್ಯಕ್ರಮ ಆಯೋಜನೆ:
ನಗರದಲ್ಲಿ ನಾಗರಿಕರಲ್ಲಿ ಡೆಂಘೀ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಿದ್ದ ಡೆಂಘೀ ವಾರಿಯರ್ ಸ್ಪರ್ಧೆಯನ್ನು ಫೋರಮ್ ಸೌತ್ ಮಾಲ್, ಮಂತ್ರಿ ಮಾಲ್, ಮಾಲ್ ಆಫ್ ಏಷ್ಯಾ ಸಹಯೋಗದೊಂದಿಗೆ ನಡೆಸಲಾಗಿದ್ದು, ಈ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ವಾರಿಯರ್ಸ್ ಭಾಗವಹಿಸಿ ಡೆಂಘೀ ಮೂಲ ಗುರುತಿಸುವಿಕೆ, ವರದಿ ಮಾಡುವಿಕೆ ಮತ್ತು ತಡೆಗಟ್ಟುವ ಕುರಿತು ವೀಡಿಯೊಗಳನ್ನು ರಚಿಸಿದರು.
ಡೆಂಘೀ ವಾರಿಯರ್ಸ್ ಸಿದ್ದಪಡಿಸಿದ ವೀಡಿಯೊಗಳು 58 ಲಕ್ಷ ವೀಕ್ಷಣೆಗಳು ಮತ್ತು 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಡೆಂಘೀ ವಾರಿಯರ್ಸ್ ಆಗಿ ಪಾಲ್ಗೊಂಡು ವಿಜೇತರಾದವರಿಗೆ *17ನೇ ಸೆಪ್ಟೆಂಬರ್ 2024 ರಂದು ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ಮಧ್ಯಾಹ್ನ 3.00 ಗಂಟೆಗೆ ಪ್ರಶಸ್ತಿ ಪುರಸ್ಕರಿಸಲಾಗುವುದೆಂದು *ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್* ರವರು ತಿಳಿಸಿರುತ್ತಾರೆ.