ಜ್ಞಾನವೆಂಬ ಪಂಜು ಹಿಡಿದು ಅಜ್ಞಾನವೆಂಬ ಕತ್ತಲೆಯ ಬೆಳಗೋಣ, ಪ್ರೀತಿ ಎಂಬ ಮಂತ್ರ ಹಿಡಿದು ದ್ವೇಷವೆಂಬ ಮನದ ದುರುಳತನವ ಗುಡಿಸೋಣ, ಹಿರಿತನದ ಬೆಳಕ ಬೀರೋಣ.
ಬಡವ ಧನಿಕ ಭೇದ ಮರೆತು, ಅಣ್ಣ ಅಕ್ಕ ಅಜ್ಜಿ ಜೊತೆಯಲ್ಲಿಂದು ಕೂಡಿ ಬೆರೆತು, ಮನೆಯ ಮನದ ಹಣತೆ ಬೆಳಗಿ ಸುಸಂಸ್ಕೃತಿಯ ದೀಪ ಬೆಳಗೋಣ.
ತನುವ ಘಾಸಿ ಮಾಡಿ, ಮನಕೆ ನೋವ ಕೊಡುವ ಜಗದಲಿ ಮನವ ದುಗುಡ ದೂರ ಮಾಡಿ, ನಗುನಗುತ ಎಲ್ಲರೊಡಗೂಡಿ ನಾಡ ಸಿರಿತನದ ದೀಪ ಬೆಳಗೋಣ …….ನಮ್ಮ ನಾವರಿಸಿದ ಕತ್ತಲೆಯ ಮರೆತು.
ಹಿರಿ ಕಿರಿಯರೆಲ್ಲ ಒಂದುಗೂಡಿ ಇಂದು ನಗು- ನಗುತಾ ಎಲ್ಲ ಹಾಡೋಣ……. ಹಾರೋಣ…..ಕುಣಿಯೋಣ …. …. ಬಾನೆತ್ತರದಿ ಹಕ್ಕಿಯ ತೆರೆದಿ …..ಆ ಭಗವಂತ ಎಲ್ಲರಿಗೂ ಖುಷಿಯ ಪಟಾಕಿ ಹಂಚಲೆಂದು ಪ್ರಾರ್ಥಿಸೋಣ ಎಲ್ಲರೂ ಜೊತೆಗೂಡಿ
ಹೇಮಾ ಕೆಎಂ ಶಿವಮೊಗ್ಗ