ಬೆಂಗಳೂರು, ಜುಲೈ 06
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಸರಿನಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಖರೀದಿಸಲಾದ ಅನುಪಯುಕ್ತ ವಾಹನಗಳನ್ನು ಈ ಮೂಲಕ ಎಲ್ಲಿದಿಯೋ ಹೇಗಿದೆಯೋ ಹಾಗೆ ಬಹಿರಂಗವಾಗಿ ಹರಾಜು ಮಾಡಿ ವಿಲೇವಾರಿ ಮಾಡಲು ಹರಾಜು ಮಾಡಲಾಗುವುದು.
ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು ಹರಾಜಿಗೆ ಸಂಬಂಧಿಸಿದಂತೆ ನೀಡಿರುವ ಷರತ್ತುಗಳನ್ವಯ ಜುಲೈ 10 ರಂದು ಪೂರ್ವಾಹ್ನ 11.45 ಗಂಟೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಕೇಂದ್ರ ನೃಪತುಂಗ ರಸ್ತೆ ಬೆಂಗಳೂರು ಕಛೇರಿಯ ಆವರಣದಲ್ಲಿ ಆಯೋಜಿಸಿರುವ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು. ಬಹಿರಂಗ ಹರಾಜನ್ನು ಬಿಡ್‍ದಾರರ ಸಮ್ಮುಖದಲ್ಲಿ ಮಾಡಲಾಗುವುದು. ಈ ಹರಾಜಿನಲ್ಲಿ ಭಾಗವಹಿಸಿ ಅತಿ ಹೆಚ್ಚು ದರ ಬಿಡ್ ಮಾಡುವ ಬಿಡ್‍ದಾರರಿಗೆ ವಾಹನವನ್ನು ವಿಲೇವಾರಿ ಮಾಡಲಾಗುವುದು. ಕೆಎ-01-ಜಿ-5022 ಹೊಂಡಾ ಸಿಟಿ ಮತ್ತು ಕೆಎ-01-ಜಿ-4724 ಮಾರುತಿ ಎಸ್‍ಎಕ್ಸ್4 ವಾಹನಗಳನ್ನು ಬಹಿರಂಗ ಹರಾಜು ಮಾಡಲಾಗುವುದು.
ಹರಾಜು ಪ್ರಕ್ರಿಯೆಲ್ಲಿ ಭಾಗವಹಿಸುವವರು ಅರ್ಜಿ ಶುಲ್ಕ ಪ್ರತೀ ವಾಹನಕ್ಕೆ ರೂ. 500/- ಹಾಗೂ ಇಎಂಡಿ ಮೊತ್ತ ರೂ. 10,000/- ಗಳನ್ನು ಮಹಾ ನಿರ್ದೇಶಕರು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಹೆಸರಿನಲ್ಲಿ ಪ್ರತ್ಯೇಕವಾಗಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಡಿಡಿ ಪಡೆದು ಸಲ್ಲಿಸಿ ಅರ್ಜಿ ಪಡೆಯಬೇಕಾಗಿರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.