ಪೂರ್ವ ವಲಯ ವ್ಯಾಪ್ತಿಯಲ್ಲಿ ಕಟ್ಟಡದ ವ್ಯತಿರಿಕ್ತ ಭಾಗಗಳನ್ನು ತೆರವು

0
19
Share this Article
0
(0)
Views: 2

ಬೆಂಗಳೂರು:

ಪೂರ್ವ ವಲಯದ ಮಾರುತಿ ಸೇವಾನಗರದ ಬಾಣಸವಾಡಿ ವ್ಯಾಪ್ತಿಯಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಿಸಿರುವ 04 (ನಾಲ್ಕು) ಪಿಲ್ಲರ್ ಗಳನ್ನು ತೆರವು ಕಾರ್ಯಾಚರಣೆ ನಡೆಸಲಾಗಿದೆ.

*ಪೂರ್ವ ವಲಯದ ವಲಯ ಆಯುಕ್ತರಾದ ಶ್ರೀಮತಿ ಸ್ನೇಹಲ್* ರವರ ಸೂಚನೆಯಂತೆ ಸರ್ವಜ್ಞನಗರ ವಿಭಾಗ, ಮಾರುತಿಸೇವಾ ನಗರ ಉಪ ವಿಭಾಗದ ಬಾಣಸವಾಡಿ ವ್ಯಾಪ್ತಿಯ ಸ್ವತ್ತಿನ ಸಂಖ್ಯೆ: 301, 7ನೇ ಮುಖ್ಯರಸ್ತೆ, ಹೆಚ್.ಆರ್.ಬಿ.ಆರ್ ಲೇಔಟ್, 1ನೇ ಬ್ಲಾಕ್‌ನಲ್ಲಿರುವ 60.40 ಸೈಟ್ ನಲ್ಲಿ ಸ್ಟಿಲ್ಟ್ +ನೆಲ++1ನೇ+2ನೇ+3ನೇ ಮಹಡಿ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ಪಡೆಯಲಾಗಿತ್ತು.

ಸದರಿ ಕಟ್ಟಡದಲ್ಲಿ ಸ್ಟಿಲ್ಟ್ ಮಹಡಿ ಹಾಗೂ ನೆಲ ಮಹಡಿಯಲ್ಲಿ 0.15 X 0.60 ಮೀಟರ್ ಅಳತೆಯ 04 (ನಾಲ್ಕು) ಪಿಲ್ಲರ್‌ಗಳನ್ನು ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ನಿರ್ಮಿಸಿರುವುದನ್ನು ಗಮನಿಸಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಲಾಗಿದೆ.

ಈ ವೇಳೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಹಾಗೂ ಇನ್ನಿತರೆ ಸಿಬ್ಬಂದಿಗಳು ಸ್ಥಳದಲ್ಲಿದ್ದರು.

*ಹೆಚ್ಚಿನ ಮಾಹಿತಿಗೆ*:

ರಾಮಕೃಷ್ಣಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಮೊಬೈಲ್ ಸಂಖ್ಯೆ- 9972910910

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here