ಬಿಬಿಎಂಪಿಯ ಪಶುಪಾಲನಾ ವಿಭಾಗವು ಬೀದಿನಾಯಿಗಳ ಸಂಖ್ಯೆ ಮತ್ತು ರೇಬೀಸ್ ರೋಗವನ್ನು ವೈಜ್ಞಾನಿಕ ಹಾಗೂ ಪರಿಣಾಮಕಾರಿ ರೀತಿಯಲ್ಲಿ ನಿಯಂತ್ರಿಸಲು ಕ್ರಮಕೈಗೊಳ್ಳಲಾಗುತ್ತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಲಯಗಳಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ನಿರಂತರವಾಗಿ ನಿಯಮಾನುಸಾರ EOI ಕರೆದು, ಸೇವಾ ಸಂಸ್ಥೆಯವರ ಮುಖೇನ ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಹಾಗೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ pet Dogs Rules-2023ರ ಮಾರ್ಗಸೂಚಿಯ ಅನುಸಾರ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿರುತ್ತದೆ.
ಬೀದಿನಾಯಿಗಳನ್ನು ರೇಬೀಸ್ ರೋಗದಿಂದ ರಕ್ಷಿಸುವ ಸಲುವಾಗಿ ಲಸಿಕೆಯನ್ನು, ಆ್ಯಂಟಿ ರೇಬೀಸ್ ವ್ಯಾಕ್ಸಿನೇಷನ್(ARV) ಕಾರ್ಯಕ್ರಮದಡಿಯಲ್ಲಿ ನೀಡಲಾಗುವುದು. ಪ್ರಸ್ತುತ ಕಾರ್ಯಕ್ರಮವು ಎಲ್ಲಾ ವಲಯಗಳಲ್ಲಿ ಪ್ರಗತಿಯಲ್ಲಿರುತ್ತದೆ.
ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಬಗ್ಗೆ, ರೇಬಿಸ್ ರೋಗನಿರೋಧಕ ಲಸಿಕೆ ಅಭಿಯಾನದ ಬಗ್ಗೆ ಹಾಗೂ ನಾಯಿಗಳ ಕಡಿತದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲಾ ವಲಯಗಳಲ್ಲೂ ಹಮ್ಮಿಕೊಳ್ಳಲಾಗುತ್ತಿರುತ್ತದೆ.
ದೂರುಗಳಿಗಾಗಿ ಸಹಾಯವಾಣಿಗೆ ಕರೆ ಮಾಡಿ:
ಡಬ್ಲ್ಯೂವಿಎಸ್ ಮತ್ತು ಕೇರ್ ಸಂಸ್ಥೆಯ ಸಹಯೋಗದೊಂದಿಗೆ ಬಿಬಿಎಂಪಿಯ ಪಶುಪಾಲನಾ ವಿಭಾಗವು ನಾಯಿ ಕಡಿತ ಪ್ರಕರಣ ಹಾಗೂ ರೇಬೀಸ್ ಶಂಕಿತ ಪ್ರಕರಣಗಳ ದೂರುಗಳಿಗಾಗಿ ರೇಬೀಸ್ *ಸಹಾಯವಾಣಿ ಸಂಖ್ಯೆಯಾದ 6364893322* ಗೆ ಕರೆ ಮಾಡಬಹುದಾಗಿದೆ. ಜೊತೆ ಪಾಲಿಕೆ ಸಹಾಯವಾಣಿ ಸಂಖ್ಯೆ *1533* ಗೂ ಕರೆ ಮಾಡಬಹುದು.
ಕೆನಲ್ಸ್ ಗಳ ಸಾಮರ್ಥ್ಯ ಹೆಚ್ಚಳ:
ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಎಬಿಸಿ ಕೇಂದ್ರಗಳನ್ನು ಒಳಗೊಂಡಂತೆ ಒಂದು ನಾಯಿಯನ್ನು ಇಡಬಹುದಾದಂತಹ 424 ಕೆನಲ್ಸ್, 10 ರಿಂದ 15 ನಾಯಿಗಳನ್ನು ಇಡಬಹುದಾದಂತಹ 8 ಕೆನಲ್ಸ್ ಹಾಗೂ ರೇಬೀಸ್ ನಾಯಿಗಳಿಗಾಗಿ ಚಿಕಿತ್ಸೆ ನೀಡಲು 4 ಐಸೋಲೇಷನ್ ಕೆನಲ್ಸ್ ಗಳಿದ್ದು, ಅವುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಳ ಮಾಡಲಾಗುವುದು.
ವಲಯ ಎಬಿಸಿ ಕೇಂದ್ರಗಳ ದುರಸ್ತಿ ಮತ್ತು ವಿಸ್ತರಣೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶುಪಾಲನಾ ವಿಭಾಗದ ಕಾರ್ಯಕ್ರಮವಾದ ಬೀದಿನಾಯಿಗಳ ಶಸ್ತçಚಿಕಿತ್ಸೆ ನೆರವೇರಿಸುವ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರಗಳ ದುರಸ್ತಿ ಮತ್ತು ವಿಸ್ತರಣಾ ಕಾಮಾಗಾರಿಗಳಿಗೆ 2024-25ನೇ ಸಾಲಿನಲ್ಲಿ ಅಂದಾಜು ರೂ. 1,77,32,000/- (ಒಂದು ಕೋಟಿ ಎಪ್ಪತ್ತೇಳು ಲಕ್ಷದ ಮೂವತ್ತೆರಡು ಸಾವಿರ) ಗಳ ಅನುದಾನವನ್ನು ಮೀಸಲಿಡಲಾಗಿರುತ್ತದೆ.