Views: 5
ಬೆಂಗಳೂರು ನಗರ ಜಿಲ್ಲೆ, ಆಗಸ್ಟ್ 20
ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ವತಿಯಿಂದ 2024-25 ನೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ CET/NEET/D-CET/PG-CET ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಅಂದರೆ ವೈದ್ಯಕೀಯ, (ಎಂಬಿಬಿಎಸ್) ದಂತ ವೈದ್ಯಕೀಯ (ಬಿಡಿಎಸ್, ಎಮಡಿಎಸ್), ಆಯುಷ್(ಬಿ.ಆಯುಷ್, ಎಂಆಯುಷ್) ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ(ಬಿ.ಇ/ಬಿ.ಟೆಕ್, ಎಂ.ಇ/ಎಂ.ಟೆಕ್) ಬ್ಯಾಚುಲರ್ ಆಪ್ ಆರ್ಕಿಟೆಕ್ಚರ್(ಬಿ.ಆರ್ಕ್, ಎಂ.ಆರ್ಕ್) ಪದವಿ ಕೋರ್ಸ್‍ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು ರಿನ್ಯೂವಲ್ (Arivu Renewal) ಸಾಲದ ಯೋಜನೆಯಡಿಯಲ್ಲಿ (ವಿದ್ಯಾಭ್ಯಾಸ ಸಾಲ) ಸಾಲ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು ವೆಬ್ ಸೈಟ್: www.kmdconline.karnataka.gov.in ಮೂಲಕ ಆಕ್ಟೋಬರ್ 31 ರೊಳಗೆ ಸಲ್ಲಿಸಬೇಕು ಹಾಗೂ ಸಲ್ಲಿಸಿದ ಅರ್ಜಿಯ ಹಾರ್ಡ್ ಕಾಪಿಗಳನ್ನು ಮೂಲ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ನವೆಂಬರ್ 02 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಉತ್ತರ ವಿಭಾಗ, ನಂ.40, 2ನೇ ಅಡ್ಡರಸ್ತೆ, ಇಯರಿಂಗ್ ಕ್ಲಿನಿಕ್ ಎದುರು, ನೂರ್ ಮಸೀದಿ ಹತ್ತಿರ, 4ನೇ ಮುಖ್ಯರಸ್ತೆ, ವಸಂತಪ್ಪ ಬ್ಲಾಕ್, ಗಂಗಾ ನಗರ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ: 080-23539786 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಉತ್ತರ ವಿಭಾಗದ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.