ಬೆಂಗಳೂರು ನಗರ ಜಿಲ್ಲೆ, ಜೂನ್ 15:
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಯಲಹಂಕ ಮತ್ತು ಆನೇಕಲ್ ತಾಲ್ಲೂಕುಗಳನ್ನೊಳಗೊಂಡ ಪ್ರದೇಶಗಳಿಗೆ ಸಮಿತಿಯ ಮಾರುಕಟ್ಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷಿ ಉತ್ಪನ್ನಗಳಗಳನ್ನು ವ್ಯವಹರಿಸುವ ಎಲ್ಲಾ ಸಗಟು ವ್ಯಾಪ್ಯಾರಿಗಳು, ಸಂಸ್ಕರಣಗಾರರು, ದಾಸ್ತಾನುದಾರರು, ಅಮದುದಾರರು, ರಫ್ತುದಾರರು, ಜಿನ್ನರ್ಸ್, ಕ್ರಷರ್ಸ್ ಹಾಗೂ ಇನ್ನಿತರೆ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ವ್ಯವಹರಿಸುವವರು ಕಡ್ಡಾಯವಾಗಿ ಬೆಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಹಾಗೂ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ ಬೆಂಗಳೂರು ಅಥವಾ ಅವರಿಂದ ಪ್ರಾಧೀಕರಿಸಲ್ಪಟ್ಟ ಅಧಿಕಾರಿಯಾದ ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ಇವರಿಂದ ಲೈಸನ್ಸ್ ಗಳನ್ನು ಪಡೆಯಬೇಕು.
ಸಮಿತಿಯ ಮಾರುಕಟ್ಟೆ ಪ್ರದೇಶದಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ವ್ಯವಹರಿಸುತ್ತಿರುವ ಪ್ರತಿಯೊಬ್ಬ ಪೇಟೆ ಕಾರ್ಯಕರ್ತರು ದಿನಾಂಕ 06.03.2024ರ ಅಂತ್ಯಕ್ಕಿದಂತೆ ಕಾಯ್ದೆ ತಿದ್ದುಪಡಿ ಪೂರ್ವದಲ್ಲಿ ಖರೀದಿಸಿದ ಕೃಷಿ ಉತ್ಪನ್ನಗಳ ದಾಸ್ತಾನಿನ ಅಂತಿಮ ಶಿಲ್ಕು ಮತ್ತು ತಿದ್ದುಪಡಿ ಕಾಯ್ದೆ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕ 07.03.2024 ರಿಂದ ಖರೀದಿಸಿದ ಕೃಷಿ ಉತ್ಪನ್ನಗಳ ಪ್ರಾರಂಭಿಕ ದಾಸ್ತಾನನ್ನು ಘೋಷಿಸಿಕೊಳ್ಳತಕ್ಕದ್ದು, ಹಾಗೆ ಘೋಷಿಸಿಕೊಂಡ ಅಧಿಸೂಚಿತ ಕೃಷಿ ಉತ್ಪನ್ನಗಳ ವಿವರವನ್ನು ನಿರ್ದಿಷ್ಟಪಡಿಸಲಾಗಿರುವ ನಮೂನೆಯ ಮೂಲಕ ಬೆಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಲ್ಲಿಸತಕ್ಕದ್ದು. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮವಹಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮಹಾತ್ಮ ಗಾಂಧಿ ಸಂಕೀರ್ಣ, ಮಾರುಕಟ್ಟೆ ಪ್ರಾಂಗಣ, ಯಶವಂತಪುರ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ: 080-23472850 / 23371695 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.