ಬೆಂಗಳೂರು, ಜೂನ್ 05:
ಚಹಾಪುಡಿಗಳಲ್ಲಿನ ಪೆಸ್ಟಿಸೈಡ್ ರೆಸಿಡ್ಯೂಸ್ ಅಂಶಗಳಿಗೆ ಸಂಬಂಧಿಸಿದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಚಹಾಪುಡಿಗಳ ಮಾದರಿಗಳನ್ನು ಸಂಗ್ರಹಿಸಿ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ. ಅವುಗಳ 45 ಮಾದರಿಗಳಲ್ಲಿ ಕೆಲವು ಪೆಸ್ಟಿಸೈಡ್ ರೆಸಿಡ್ಯೂಸ್ ಅಂಶಗಳು ನಿಗಧಿತ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿರುತ್ತದೆ.
ಧಾರವಾಡದ ಅಮೃತ್ ಟೀ ಪೌಡರ್ ಬ್ಯಾಚ್ ನಂ 3, ಅಮೃತ್ ಪ್ರೀಮಿಯಂ ಟೀ ಪೌಡರ್ ಬ್ಯಾಚ್ ನಂ. 2, ಅಮೃತ್ ಗೋಲ್ಡ್ ಟೀ ಪೌಡರ್ ಬ್ಯಾಚ್ ನಂ.2, ಬಾಗಲಕೋಟೆಯ ಸಲಿಮಾರ್ – ಗೋಲ್ಡ್ ಪ್ರೀಮಿಯಂ ಅಸ್ಸಾಂ ಟೀ ಪೌಡರ್ ಬ್ಯಾಚ್ ನಂ. ಡಿಸಿ1476, ವಾಗ್ ಬಕ್ರಿ ಲೀಪ್ ಟೀ ಬ್ಯಾಚ್ ನಂ.ಡಿಕೆಕೆಸಿಎಲ್‍ಜಿಎಎಸ್‍ಇಸಿಬಿ5127, ಅಸ್ಸಾಂ ಗೋಲ್ಡ್ ಕಪ್ ಸಿಟಿಸಿ ಟೀ ಬ್ಯಾಚ್ ನಂ.ಎಎಸ್‍ಎಲ್ 226 ಟೀಪೌಡರ್ (ಅನ್‍ಬ್ರಾಂಡೆಡ್) ಬೆಳಗಾವಿಯ ಲೂಸ್ ಟೀ ಪೌಡರ್ ಅನ್‍ಬ್ರಾಂಡೆಡ್, ಬಳ್ಳಾರಿಯ ಬ್ರೂಕ್ ಬ್ರಾಂಡ್ ಲೆಡ್ ಲೇಬಲ್ ಟೀ ಬ್ಯಾಚ್ ನಂ.ಎಫ್11ಸಿಐ, ಟೀ ಪೌಡರ್ – ಮಿಲಿ ಪ್ರೀಮಿಯಂ ಬ್ಯಾಚ್ ನಂ ಡಿಡಿ.ಸಿಎಚ್7 ಎಫ್‍ಬಿಎಸ್‍ಇಸಿಬಿ1173, ಮಂಜುನಾಥ ಸ್ಪೆಷಲ್ ರಾಯಲ್ ಟೀ ಬ್ಯಾಚ್ ನಂ.ಎಂಸಿ05, ಬೀದರ್‍ನ ಟೀ ಪೌಡರ್ (ಅನ್‍ಬ್ರಾಂಡೆಡ್) ಲೂಸ್ ಟೀ ಪೌಡರ್ (ಅನ್‍ಬ್ರಾಂಡೆಡ್), ಹಾವೇರಿಯ ಲೂಸ್ ಟೀ ಪೌಡರ್ ಬ್ಯಾಚ್ ಎ431/1ಎ525/1, ಟೀ ಪೌಡರ್ ಅನ್‍ಬ್ರಾಂಡೆಡ್ ಬಾಗಲಕೋಟೆಯ ಲೂಸ್ ಟೀ ಪೌಡರ್ ಅನ್‍ಬ್ರಾಂಡೆಡ್, ಗದಗ್‍ನ ಟೀ ಪೌಡರ್ ಅನ್‍ಬ್ರಾಂಡೆಡ್ ಬ್ಯಾಚ್ ನ. 06ಪಿಪಿ44-2, ಲೂಸ್ ಟೀ ಪೌಡರ್ ಅನ್‍ಬ್ರಾಂಡೆಡ್, ರಾಯಚೂರಿನ ಮೋದಿ ಗೋಲ್ಡ್ ಟೀ ಬ್ಯಾಚ್ ನಂ.4ಎಚ್40ಜಿ, ಟೀ ಪೌಡರ್ (ರೂಬಿ) ಬ್ಯಾಚ್ ನಂ. ಎಚ್‍ಎಫ್21ಎ6, ಟೀ ಪೌಡರ್-ಮಹಾವೀರ್ ಸಿಟಿಸಿ ಡಸ್ಟ್ ಟೀ ಬ್ಯಾಚ್ ನಂ ಆರ್‍ಕೆ25, ನೂಟಾನ್ಸ್ ಸೂಪರ್ ಟೇಸ್ಟಿ ಸ್ಪೆಷಲ್ ಗಾರ್ಡನ್ ಪ್ರೆಶ್ ಟೀ ಬ್ಯಾಚ್ ನಂ.ಎಸ್‍ಟಿ07, ನೂಟಾನ್ಸ್ ಸೂಪರ್ ಟೇಸ್ಟಿ ಟೀ ಬ್ಯಾಚ್ ನಂ.ಇಎಲ್09, ಟೀ ಪೌಡರ್ ಅನ್‍ಬ್ರಾಂಡೆಡ್, ವಿಜಯಪುರದ ಟಿಇಝಡ್ ಎಲಾಚೀ ಚಾಯ್ ಬ್ಯಾಚ್ ನಂ.ಎ324/4, ಟೀ ಪೌಡರ್ (ರೆಡ್ ಲೇಬಲ್) ಬ್ಯಾಚ್ ನಂ. ಜೆ10ಬಿ2, ರೆಡ್ ಲೇಬಲ್ ಟೀ ಪೌಡರ್ ಬ್ಯಾಚ್ ನಂ ಜೆ10ಬ6, ಟೀ-ಪೌಡರ್ ಜಿಎಸ್ ಟೀ, ಎಚ್‍ಡಿಎಂಸಿ ಹುಬ್ಬಳ್ಳಿಯ ಟೀ ಪೌಡರ್ (ಲೂಸ್), ರೆಡ್ ಲೇಬಲ್ ಟೀ ಪೌಡರ್ ಬ್ಯಾಚ್ ನಂ. ಎಫ್12ಎ2, ಕೊಪ್ಪಳದ ಶಾಲಿಮರ್ ಗೋಲ್ಡ್ ಟೀ ಬ್ಯಾಚ್ ನಂ ಡಿಸಿ1022, ಶಿವಗಂಗ ಗೋಲ್ಡ್ ಟೀ ಬ್ಯಾಚ್ ನಂ 00, ಟೀ (ಅನ್‍ಬ್ರಾಂಡೆಡ್), ಯಾದಗಿರಿಯ ಟೀ ಪೌಡರ್ ಅನ್‍ಬ್ರಾಂಡೆಡ್, ವಿಜಯನಗರದ ಟೀ ಪೌಡರ್ ಅನ್‍ಬ್ರಾಂಡೆಡ್, ಟೀ ಪೌಡರ್ ವಾಗ್ ಬಕ್ರಿ ಬ್ಯಾಚ್ ನಂ.ಡಿಡಿಎಚ್‍ಎಸ್3ಜಿಎಎಸ್‍ಇಸಿಬಿ3032 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿರುವ ಕಾರಣ ಆಹಾರ ಮಾದರಿಗಳ ತಯಾರಕರುಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮಗಳು 2011ರನ್ವಯ ಕಾನೂನು ಕ್ರಮವಹಿಸಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.