ಧಾರವಾಡ ಜೂನ್.07:
ಪ್ರಸಕ್ತ ಸಾಲಿನಲ್ಲಿ ನಿಗದಿ ಗ್ರಾಮದಲ್ಲಿರುವ ಸರಕಾರಿ ಕೈಗರಿಕಾ ತರಬೇತಿ ಸಂಸ್ಥೆಯಿಂದ ಎರಡು ವರ್ಷದ ಫಿಟ್ಟರ್ ಹಾಗೂ ಎಲೆಕ್ಟ್ರಿಷಿಯನ್ ವೃತ್ತಿಪರ ಕೋರ್ಸಗಳಲ್ಲಿ ತರಬೇತಿ ನೀಡಲು ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ವೆಬ್‍ಸೈಟ್ www.cite.Karnataka.gov.in ನಲ್ಲಿ ಜೂನ್ 09, 2024 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಿರಿಯ ತರಬೇತಿ ಅಧಿಕಾರಿ ಆನಂದ ನಾಯಕವಾಡಿ (8217627744) ರಾಚಯ್ಯ ಧಾಬಿಮಠ (7760520427) ಅವರನ್ನು ಸಂಪರ್ಕಿಸಬಹುದು ಎಂದು ನಿಗದಿಯ ಸರ್ಕಾರಿ ಕೈಗರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.