ಆಯುಷ್ ಇಲಾಖೆಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

0
37
Share this Article
0
(0)
Views: 0

ಬೆಂಗಳೂರು, ಮೇ 29:

ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿದ್ದ ಆಯುಷ್ ಇಲಾಖೆಯಲ್ಲಿನ ಹೊಮಿಯೋಪತಿ ಸಹ ಪ್ರಾಧ್ಯಾಪಕರು-01 (ಅನಾಟಮಿ) (ಬ್ಯಾ.ಲಾ) ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ.

ದಿನಾಂಕ: 15-03-2024ರಂದು ಅಧಿಸೂಚಿಸಲಾಗಿದ್ದ ಆಯುಷ್ ಇಲಾಖೆಯಲ್ಲಿನ ಹೊಮಿಯೋಪತಿ ಸಹ ಪ್ರಾಧ್ಯಾಪಕರು-01 (ಅನಾಟಮಿ) (ಬ್ಯಾ.ಲಾ) ಹುದ್ದೆಗೆ ಅರ್ಜಿ ಸಲ್ಲಿಸಲು 21-05-2024 ಕೊನೆಯ ದಿನಾಂಕವಾಗಿತ್ತು. ಅಭ್ಯರ್ಥಿಗಳು ಆಯೋಗಕ್ಕೆ ಮನವಿಯನ್ನು ಸಲ್ಲಿಸಿ, ಲೋಕಸಭಾ ಚುನಾವಣೆ -2024ರ ಹಿನ್ನೆಲೆಯಲ್ಲಿ ಕೆಲವು ಇಲಾಖೆಗಳಲ್ಲಿನ ಅಧಿಕಾರಿಗಳ ಅಲಭ್ಯತೆಯಿಂದಾಗಿ ಅಗತ್ಯ ದಾಖಲೆಗಳನ್ನು ನಿಗದಿತ ಸಮಯದೊಳಗೆ ಪಡೆಯಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದು, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ದಿನಾಂಕ:15-03-2024ರ ಅಧಿಸೂಚನೆಯಲ್ಲಿನ ಇತರೆ ಷರತ್ತು/ಸೂಚನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವೆಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 
 
 

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here