Views: 0
ಧಾರವಾಡ ಜೂನ್.03:
ಹಾವೇರಿ ಜಿಲ್ಲಾ ರಾಣೆಬೆನ್ನೂರಿನ ಕೌಶಿಕ್ ಕರೆಗೌಡರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವನಗರ ಹುಬ್ಬಳ್ಳಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಕಾಲೇಜಿನ ಸಮವಸ್ತ್ರದ ಸಲುವಾಗಿ ಎದುರುದಾರ ಮುಂಬೈನ ರಿಲಾಯನ್ಸ್ ರಿಟೇಲ್ ಇವರ ಬಳಿ ಆನ್ ಲೈನ್ ಮೂಲಕ ಕಪ್ಪು ಬಣ್ಣದ ಪ್ಯಾಂಟನ್ನು ರೂ.849.50ಪೈಸೆ ಗಳಿಗೆ ಖರೀದಿಸಿದ್ದರು. ಡಿಲೆವರಿ ಪ್ಯಾಕನ್ನು ತೆರೆದು ನೋಡಿದಾಗ ಆ ಪ್ಯಾಂಟ ಹಳೆಯ ಮತ್ತು ಉಪಯೋಗಿಸಿರುವುದು ಕಂಡು ಬಂದು, ಎದುರುದಾರರ ಕಂಪನಿಯ ನಿಯಮದಂತೆ 14 ದಿನದೊಳಗೆ ಪ್ಯಾಂಟನ್ನು ಬದಲಾಯಿಸಿಕೊಡಲು ಕೋರಿದ್ದರು. ಆದರೆ ಇಂದಿನವರೆಗೂ ಪ್ಯಾಂಟನ್ನು ಬದಲಾಯಿಸಿ ಕೊಡದೇ ಅಥವಾ ಅದರ ಮೌಲ್ಯವನ್ನು ಹಿಂದಿರುಗಿಸದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ. ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:15/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರರು ತಮ್ಮ ಪ್ರಕರಣ ಸಾಬೀತು ಪಡಿಸಲು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗ ಎದುರುದಾರರು ಹಣ ಪಡೆದು ಉಪಯೋಗಿಸಿದ ಹಳೆಯ ಪ್ಯಾಂಟನ್ನು ದೂರುದಾರರಾದ ಗ್ರಾಹಕನಿಗೆ ಮಾರಾಟ ಮಾಡಿರುವುದು ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯ ಪಟ್ಟು ತೀರ್ಪು ನೀಡಿ ದೂರುದಾರರು ಕೊಟ್ಟಂತಹ ಪ್ಯಾಂಟ ಮೌಲ್ಯದ ಜೊತೆಗೆ ರೂ. 10,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.5,000/- ಗಳನ್ನು ದೂರುದಾರರಿಗೆ ಕೊಡುವಂತೆ ರಿಲಾಯನ್ಸ್ ರಿಟೇಲ್ ಕಂಪನಿಗೆ ಆಯೋಗ ಆದೇಶಿಸಿದೆ.