ಧಾರವಾಡ ಜೂನ್.10:
ಮೇ 31, 2024 ರಂದು ಬಾಷಲ್ ಮಿಶನ್ ಬಾಲಕಿರ ಪ್ರೌಡ ಶಾಲೆಯಲ್ಲಿ ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರು ರಾಷ್ಟ್ರೀಯ ಯೋಗ ಒಲಂಪಿಯಡ್ ಸ್ಪರ್ಧೆಯನ್ನು ಏರ್ಪಡಿಸಿದ್ದು, ಅದರಲ್ಲಿ ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ಶಾಲೆಯ ವಿದ್ಯಾರ್ಥಿಯಾದ ವಿಜಯ್ ಅರಳಿಕಟ್ಟಿ ವಯಾ-14 ವರ್ಷ ಇವರು ಪ್ರಥಮ ಸ್ಥಾನ ಪಡೆದು ಧಾರವಾಡ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ಅವರು ಆಯ್ಕೆಯಾದ ವಿದ್ಯಾರ್ಥಿಗೆ ಶುಭ ಹಾರೈಸಿದರು. ಇದೆ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರಾದ ಡಾ. ಎಸ್. ಒ. ಬಿರಾದರ, ಯೋಗ ಶಿಕ್ಷಕರಾದ ಡಾ. ಪ್ರಕಾಶ ಪವಾಡಶೆಟ್ಟಿ, ದೈಹಿಕ ಶಿಕ್ಷಕರಾದ ಪಿ.ಡಿ.ರೋಣದ ಅವರು ಉಪಸ್ಥಿತರಿದ್ದರು ಎಂದು ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.