ಲೋಕಾಯುಕ್ತ ಅಧಿಕಾರಿಗಳಿಂದ ನಗರ ಸ್ವಚ್ಛತೆ ಪರಿಶೀಲನೆ

0
36
Share this Article
0
(0)
Views: 0

ಶಿವಮೊಗ್ಗ, ಜೂನ್ 11:

ಜೂನ್ 11 ರಂದು ಶಿವಮೊಗ್ಗ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ನಗರದ ಬುದ್ದನಗರ, ಆರ್.ಎಂ.ಎಲ್ ನಗರ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ಹರಕೆರೆ, ನ್ಯೂ ಮಂಡ್ಲಿ, ಊರುಗಡೂರು. ಮದಾರಿ ಪಾಳ್ಯ ವಿದ್ಯಾನಗರ, ರಾಜೀವ್ ಗಾಂಧಿ ಬಡಾವಣೆ, ಟ್ಯಾಂಕ್ ಮೊಹಲ್ಲಾ, ಶಾಂತಿನಗರ, ರಾಗಿಗುಡ್ಡ, ಶಾಂತಿನಗರ-ನವುಲೆ ಮುಖ್ಯ ರಸ್ತೆ ಚಾನೆಲ್ ಬಳಿ, ಮ್ಯಾಕ್ಸ್ ಆಸ್ಪತ್ರೆ ಪಕ್ಕದಲ್ಲಿರುವ ಕನ್ನರ್‍ವೆನ್ಸಿ ರಸ್ತೆ ಹಾಗೂ ಇತರೆ ಪ್ರದೇಶಗಳಲ್ಲಿ ಸಂಚರಿಸಿದ್ದು, ನಂತರ ಸಾಗರ ರಸ್ತೆ ಬಿ.ಎಸ್.ಎನ್.ಎಲ್ ಕಛೇರಿ ಬಳಿ ಇರುವ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಮತ್ತು ನಗರ ಸ್ವಚ್ಚತೆ ಬಗ್ಗೆ ಪರಿಶೀಲನೆಯನ್ನು ನಡೆಸಿರುತ್ತಾರೆ.

ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ ಎಂ.ಹೆಚ್. ರವರು ಲೋಕಾಯುಕ್ತ ಠಾಣೆಯ ಅಧಿಕಾರಿಗಳಾದ ಉಮೇಶ್ ಈಶ್ವರ ನಾಯ್ಕ, ಡಿ.ಎಸ್.ಪಿ ಮತ್ತು ಪೆÇಲೀಸ್ ನಿರೀಕ್ಷಕರುಗಳಾದ ಸುರೇಶ್ ಹೆಚ್.ಎಸ್, ಪ್ರಕಾಶ್, ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿಗಳೊಂದಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣಗೌಡ ಮತ್ತು ಅವರ ಅಧಿಕಾರಿ ಸಿಬ್ಬಂದಿಗಳು, ಇಂಜಿನಿಯರ್‍ಗಳು ಮತ್ತು ಸದರಿ ಪ್ರದೇಶದ ವಾರ್ಡ್‍ಗಳ ಆರೋಗ್ಯ ನಿರೀಕ್ಷಕರನ್ನು ಬರಮಾಡಿಕೊಂಡು ಸ್ಥಳಗಳನ್ನು ಪರಿಶೀಲನೆ ಮಾಡಿದರು,

 ಡ್ರೈನೇಜ್ ನೀರು ಸಂಗ್ರಹಣೆ ಆಗಿರುವುದು, ರಸ್ತೆಯ ಅಕ್ಕಪಕ್ಕದಲ್ಲಿ ಕಸಗಳ ರಾಶಿ ಬಿದ್ದಿರುವುದು, ಖಾಲಿ ಜಾಗದಲ್ಲಿ ಗಿಡಗಂಟೆಗಳು ಬೆಳೆದು ಹಂದಿಗಳು ವಾಸ ಮಾಡಿಕೊಂಡು ಗಲೀಜು ಮಾಡಿರುವ ಮತ್ತು ಹಲವಾರು ದಿವಸಗಳಿಂದ ರಸ್ತೆಗಳಲ್ಲಿ ಬಿದ್ದಿರುವ ಕಸಗಳನ್ನು ತೆಗೆಯದೆ ಹಾಗೆ ಬಿಟ್ಟಿರುವ ಪ್ರದೇಶಗಳನ್ನು ಗುರುತಿಸಿ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಅಧಿಕಾರಿಗಳಿಗೆ ಕೂಡಲೇ ಈ ಸ್ಥಳಗಳನ್ನು ಸ್ವಚ್ಛಗೊಳಿಸಬೇಕೆಂದು, ಚರಂಡಿಗಳು ಮತ್ತು ಡ್ರೈನೇಜ್ ಸ್ವಚ್ಚ ಮಾಡಿಸುವಂತೆ ಸೂಚನೆಗಳನ್ನು ನೀಡಿದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here