ಶಿವಮೊಗ್ಗ, ಜೂನ್ 13:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಸಂಬಂಧಿಸಿದಂತೆ ಪೋಷಣ್ ಅಭಿಯಾನ ಯೋಜನೆಯಡಿ ಜಿಲ್ಲಾ ಸಂಯೋಜಕರು, ಜಿಲ್ಲಾ ಕಾರ್ಯಕ್ರಮ ಸಹಾಯಕರು, ಶಿವಮೊಗ್ಗ ತಾ|| ಯೋಜನಾ ಸಹಾಯಕರು, ಸೊರಬ ತಾ|| ಯೋಜನಾ ಸಹಾಯಕರು, ಸಖಿ ಒನ್ ಸ್ಟಾಪ್ ಸೆಂಟರ್ ಸಾಗರ ಘಟಕಕ್ಕೆ ಸಂಬಂಧಿಸಿದ ಸೆಂಟರ್ ಅಡ್ಮಿನಿಸ್ಟ್ರೇಟರ್, ಸಮಾಲೋಚಕರು, ಸಾಮಾಜಿಕ ವಿಷಯ ನಿರ್ವಾಹಕರು, ವಿವಿದೋದ್ಧೇಶ ಕಾರ್ಯಕರ್ತರು (ಸೆಕ್ಯೂರಿಟಿ), ಜಿಲ್ಲಾ ಮಹಿಳಾ ಸಬಲೀಕರಣ ಘಟಕಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಿಷನ್ ಕೋ-ಆರ್ಡಿನೇಟರ್, ಸ್ಪೆಷಲಿಸ್ಟ್ ಇನ್ ಫೈನಾನ್ಸಿಯಲ್ ಲಿಟ್ರಸಿ ಅಂಡ್ ಅಕೌಂಟೆಂಟ್ ಹುದ್ದೆಗಳಿಗೆ ನೇರ ಗುತ್ತಿಗೆ / ಬಾಹ್ಯ ಸಂಪನ್ಮೂಲದಿಂದ ಸಿಬ್ಬಂದಿಗಳನ್ನು ನಿಯೋಜನೆಗೆ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಹಾಗೂ ಕಾಯ್ದಿರಿಸಿದ ಪಟ್ಟಿಯನ್ನು ಕಚೇರಿಯ ಪ್ರಚಾರ ಫಲಕದಲ್ಲಿ ಪ್ರಟಿಸಿದ್ದು, ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಇಲಾಖಾ ಕಚೇರಿಗೆ ಲಿಖಿತವಾಗಿ ಮುದ್ದಾಂ ಆಕ್ಷೇಪಣೆಯನ್ನು ಜೂನ್ 19 ರೊಳಗಾಗಿ ಸಲ್ಲಿಸತಕ್ಕದ್ದು. ತದನಂತರ ಬಂದ ಆಕ್ಷೇಪಣೆಗಳನ್ನು ಪುರಸ್ಕರಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲ ತಿಳಿಸಿರುತ್ತಾರೆ.