ಬೆಂಗಳೂರು ನಗರ ಜಿಲ್ಲೆ, ಜೂನ್ 19:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜನಕರು., ಹಣಕಾಸು ಸಾಕ್ಷರತೆ ಮತ್ತು ಅಕೌಂಟೆಟ್ ನಲ್ಲಿ ತಜ್ಞರು ಹುದ್ದೆಗೆಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜನಕರು ಹುದ್ದೆಗೆ ಸಮಾಜ ವಿಜ್ಞಾನ, ಜೀವನ ವಿಜ್ಞಾನ, ಪೌಷ್ಠಿಕತೆ, ಆರೋಗ್ಯ ನಿರ್ವಹಣೆ, ಸಮಾಜಿಕ ಕೆಲಸ, ಗ್ರಾಮೀಣ ನಿರ್ವಣೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಸರ್ಕಾರಿ / ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 03 ವರ್ಷಗಳ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಳಕೆಯಲ್ಲಿ, ಕನ್ನಡ / ಇಂಗ್ಲೀಷ್ ಬೆರಳಚ್ಚು, ಗೂಗಲ್ ಶೀಟ್ ಎಂ.ಎಸ್. ಆಫೀಸ್ ಹಾಗೂ ಪಿ.ಪಿ.ಟಿ ಯಲ್ಲಿ ಪ್ರವೀಣ್ಯತೆ ಹೊಂದಿರಬೇಕು. ಸ್ಥಳೀಯ ಭಾಷೆ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಹಣಕಾಸು ಸಾಕ್ಷರತೆ ಮತ್ತು ಅಕೌಂಟೆಟ್ ನಲ್ಲಿ ತಜ್ಞರು ಹುದ್ದೆಗೆ ಅರ್ಥಶಾಸ್ತ್ರ, ಬ್ಯಾಂಕಿಂಗ್ , ಇತರೆ ವಿಭಾಗಗಳಲ್ಲಿ ಪದವೀಧರರು, ಸ್ನಾತಕೋತ್ತರ ಪದವಿ ಹೊಂದಿದವರಿಗೆ ಅದ್ಯತೆ. ಸರ್ಕಾರಿ / ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 03 ವರ್ಷಗಳ ಅನುಭವ ಹೊಂದಿರಬೇಕು. . ಕಂಪ್ಯೂಟರ್ ಬಳಕೆಯಲ್ಲಿ, ಕನ್ನಡ / ಇಂಗ್ಲೀಷ್ ಬೆರಳಚ್ಚು, ಗೂಗಲ್ ಶೀಟ್ ಎಂ.ಎಸ್. ಆಫೀಸ್ ಹಾಗೂ ಪಿ.ಪಿ.ಟಿ ಯಲ್ಲಿ ಪ್ರವೀಣ್ಯತೆ ಹೊಂದಿರಬೇಕು. ಸ್ಥಳೀಯ ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಅದ್ಯತೆ.
ಆಸಕ್ತರು ಅಭ್ಯರ್ಥಿಗಳು ಉಪ ನಿರ್ದೇಶಕರವರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಹೆಚ್. ಮರಿಗೌಡ ರಸ್ತೆ, ಬೆಂಗಳೂರು -560029 ಇಲ್ಲಿಗೆ ತಮ್ಮ ವ್ಯಕ್ತಿಗತ ವಿವರ (Resume) ಅನ್ನು ಎಲ್ಲಾ ದಾಖಲೆಗಳೊಂದಿಗೆ ಜೂನ್ 30 ರೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-26578688 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.