ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ನೂತನ ತಂತ್ರಜ್ಞಾನ ಆಧಾರಿತ ತಂತ್ರಾಂಶಗಳ ಬಳಕೆಗೆ ಪ್ರಾಶಸ್ತ್ಯ-ಎಡಿಜಿಪಿ ಡಾ.ಪ್ರೊನಬ್ ಮೊಹಾಂತಿ

0
36
Share this Article
0
(0)
Views: 0

ಬೆಂಗಳೂರು, ಜೂನ್ 22:

ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ನೂತನ ತಂತ್ರಜ್ಞಾನ ಆಧಾರಿತ ತಂತ್ರಾಂಶಗಳ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಡೇಟಾಥಾನ್ ಕಾರ್ಯಕ್ರಮವು ಸಹಕಾರಿಯಾಗಲಿದೆ ಎಂದು ಪೊಲೀಸ್ ಕಂಪ್ಯೂಟರ್ ವಿಭಾಗದ ಎಡಿಜಿಪಿ ಡಾ. ಪ್ರೊನಬ್ ಮೊಹಾಂತಿ ಅವರು ತಿಳಿಸಿದರು.

ಇಂದು ಮೈಕ್ರೊಸಾಪ್ಟ್ ರಿಸರ್ಚ್ ಕಛೇರಿಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಮೈಕ್ರೋಸಾಫ್ಟ್ ಸಂಸ್ಥೆ ಮತ್ತು ಹ್ಯಾಕ್2ಸ್ಕಿಲ್ ಸಂಸ್ಥೆಯ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪೊಲೀಸ್ ಡೇಟಾಥಾನ್-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಧಿಕಾರಿಗಳು ಡೇಟಾಥಾನ್ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯು ಎದುರಿಸುತ್ತಿರುವ ಪ್ರೆಟಿಕ್ಟಿವ್ ಕ್ರೈಮ್ ಅನಾಲಿಟಿಕ್ಸ್, ಸಂಚಾರ ಹರಿವು ಆಪ್ಟಿಮೈಶೇಷನ್ ಮತ್ತು ದಟ್ಟಣೆ ನಿರ್ವಹಣೆ, ಪೊಲೀಸ್ ಕಾರ್ಯಕ್ಷಮತೆ ಮತ್ತು ಸಂಪನ್ಮೂಲ ನಿರ್ವಹಣೆ, ಕಾನೂನು ಜಾರಿಯಲ್ಲಿ ಡೇಟಾ ಗೌಪ್ಯತೆ, ಅಪಘಾತ ದತ್ತಾಂಶ ವಿಶ್ಲೇಷಣೆ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ ಎಂದರು.

ಡೇಟಾಥಾನ್‍ಗೆ ದೇಶದ ವಿವಿಧ ಸ್ಥಳಗಳಲ್ಲಿನ, ವೃತ್ತಿಪರ ಸಾಪ್ಟ್‍ವೇರ್ ಇಂಜಿನಿಯರ್‍ಗಳು, ಸ್ಟಾರ್ಟ್‍ಅಪ್ ಸಂಸ್ಥೆಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಡೆಮೊ ಮೂಲಕ ತಮ್ಮ ಐಡಿಯಾಗಳನ್ನು ತಿಳಿಸುವುದರಿಂದ ಪೊಲೀಸ್ ಇಲಾಖೆಯು ಎದುರಿಸುತ್ತಿರುವ ಸಮಸ್ಯೆಗಳಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿ ಪರಿಹಾರಗಳನ್ನು ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದರು.

ಮೈಕ್ರೊಸಾಪ್ಟ್‍ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಐರಿನಾ ಘೋಸೆ ಮಾತನಾಡಿ ಕಾರ್ಯಕ್ರಮವು ಪೊಲೀಸ್ ಇಲಾಖೆಯು ಎದುರಿಸುತ್ತಿರವ ಸಮಸ್ಯೆಗಳಿಗೆ ನೂತನ ತಂತ್ರಜ್ಞಾನ, ಆವಿಷ್ಕಾರಗಳ ಮೂಲಕ ಅಪರಾಧಗಳನ್ನು ತಡೆಗಟ್ಟಲು, ಅಪಘಾತಗಳನ್ನು ಕಡಿಮೆ ಮಾಡಲು ತಾಂತ್ರಿಕ ಪರಿಹಾರಗಳನ್ನು ಒದಗಿಸುವುದು ಎಂದರು.

ಐಐಐಟಿ ನಿರ್ದೇಶಕರಾದ ಪ್ರೊ. ಡೆಬಬ್ರತಾ ದಾಸ್ ಅವರು ಮಾತನಾಡಿ ಡೇಟಾಥಾನ್ ಕಾರ್ಯಕ್ರಮಕ್ಕೆ 11000ಕ್ಕೂ ಹೆಚ್ಚು ನೋಂದಣಿಗಳು ಬಂದಿದ್ದು, ಇದರಲ್ಲಿ 15 ತಂಡಗಳು ಆಯ್ಕೆಯಾಗಿ ಬಂದಿರುವುದು ಸಂತೋಷದ ವಿಷಯ. ಧೈರ್ಯ, ಆತ್ಮವಿಶ್ವಾಸದಿಂದ ಇಲ್ಲಿಗೆ ಬಂದಿದ್ದೀರಿ. ಧೈರ್ಯವು ಜೀವನಪೂರ್ತಿ ನಿಮಗೆ ಇರಲಿ. ನಿಮ್ಮಲ್ಲಿರುವ ಐಡಿಯಾಗಳನ್ನು ನಮ್ಮಲ್ಲಿ ಹಂಚಿಕೊಳ್ಳುವುದರಿಂದ ಪೊಲೀಸ್ ಇಲಾಖೆಗೆ ಸಹಾಯವಾಗುತ್ತದೆ ಎಂದರು.
ರಾಜ್ಯ ಅಪರಾಧ ದಾಖಲೆಗಳ ವಿಭಾಗದ ಪೊಲೀಸ್  ವರಿಷ್ಠಾಧಿಕಾರಿಗಳಾದ ಲಕ್ಷ್ಮನ್ ನಿಂಬರಗಿ ಅವರು ಮಾತನಾಡಿ ಡೇಟಾಥಾನ್‍ಗೆ ದೇಶದ ವೃತ್ತಿಪರ ಸಾಫ್ಟ್‍ವೇರ್ ಇಂಜಿನಿಯರ್‍ಗಳು, ಸ್ಟಾರ್ಟ್‍ಅಪ್ ಸಂಸ್ಥೆಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 11000ಕ್ಕೂ ಹೆಚ್ಚು ಜನ ನೋಂದಣಿ ಬಂದಿದ್ದು ಅದರಲ್ಲಿ 890 ಐಡಿಯಾಗಳನ್ನು ಸಲ್ಲಿಸಿರುತ್ತಾರೆ. ಐಡಿಯಾಗಳನ್ನು ಪರಿಶೀಲಿಸಿ ಪ್ರತಿಯೊಂದು ಪ್ರಾಬ್ಲಮ್ ಸ್ಟೇಟ್‍ಮೆಂಟ್‍ಗೆ 30 ತಂಡಗಳಂತೆ ಒಟ್ಟು 150 ತಂಡಗಳನ್ನು ತಂತ್ರಜ್ಞಾನ ಅಭಿವೃದ್ಧಿ ಸುತ್ತಿಗೆ ಆಯ್ಕೆ ಮಾಡಲಾಯಿತು. ಇದರಲ್ಲಿ 15 ತಂಡಗಳನ್ನು ಆಯ್ಕೆ ಮಾಡಲಾಗಿದ್ದು ಅವರು ಇಂದು ಡೆಮೊ ನೀಡಲಿದ್ದಾರೆ. ಪೊಲೀಸ್ ಇಲಾಖೆಯು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here