ಬೆಂಗಳೂರು, ಜೂನ್ 25:
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಜೂನ್ 11 ರಿಂದ https://kbocwwb.karnataka.gov.in ಜಾಲತಾಣದ ಮೂಲಕ ತಂತ್ರಾಂಶವನ್ನು ಪುನರಾರಂಭಿಸಲಾಗಿರುತ್ತದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೂತನ ತಂತ್ರಾಂಶದಲ್ಲಿ ಕಂಡು ಬಂದ ತಾಂತ್ರಿಕ ಕಾರಣಗಳಿಂದಾಗಿ ಫೆಬ್ರವರಿ 6 ರಿಂದ ತಂತ್ರಾಂಶವನ್ನು ಸ್ಥಗಿತಗೊಳಿಸಿ ನಿರ್ವಹಣೆಯಲ್ಲಿ ಇಡಲಾಗಿತ್ತು ಹಾಗೂ 2024ರ ಸಾರ್ವತ್ರಿಕ ಲೋಕಸಭೆ ಚುನಾವಣಾ ಮಾದರಿ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ನೂತನ ತಂತ್ರಾಂಶವನ್ನು ಪುನರಾರಂಭಿಸಲು ಸಾಧ್ಯವಾಗಿರುವುದಿಲ್ಲ.
ತಾಂತ್ರಿಕ ಕಾರಣಗಳಿಂದಾಗಿ 2023ನೇ ಅಕ್ಟೋಬರ್ 17 ರಿಂದ 2024 ನೇ ಜೂನ್ 10 ರವರೆಗೆ ವಿವಿಧ ಸೌಲಭ್ಯಗಳನ್ನು ಕೋರಿ ಅರ್ಜಿ ಸಲ್ಲಿಸಲು ಸಾಧ್ಯವಾಗದ/ಕಾಲವಧಿ ಮುಕ್ತಾಯವಾದ ಪ್ರಕರಣಗಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಜೂನ್ 11 ರಿಂದ ಸೆಪ್ಟೆಂಬರ್ 30 ರವರೆಗೆ ಹೆಚ್ಚುವರಿ ಕಾಲಾವಕಾಶ ಕಲ್ಪಿಸಲಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.