ಬೆಂಗಳೂರು ನಗರ ಜಿಲ್ಲೆ, ಜೂನ್ 12:
ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ (ಎನ್.ಆರ್.ಎಲ್.ಎಮ್) ಜಿಲ್ಲಾ ಮತ್ತು ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಜಿಲ್ಲಾ ಎಂ.ಐ.ಎಸ್ ಸಹಾಯಕ ಕಮ್ ಡಿ.ಇ.ಓ ಹುದ್ದೆಗೆ ಪದವಿ ಹೊಂದಿರಬೇಕು., ತಾಲ್ಲೂಕು ಕಾರ್ಯಕ್ರಮ ನಿರ್ವಾಹಕ ಹುದ್ದೆಗೆ ಸ್ನಾತಕೋತ್ತರ ಪದವಿ ಮತ್ತು ಪಿ.ಜಿ ಡಿಪ್ಲೋಮಾ ಹೊಂದಿರಬೇಕು., ಕ್ಲಸ್ಟರ್ ಮೇಲ್ವಿಚಾರಕ ಹುದ್ದೆಗೆ ಪದವಿ ಹೊಂದಿರಬೇಕು., ಜಿಲ್ಲಾ ವ್ಯವಸ್ಥಾಪಕ ಜೀವನೋಪಾಯ ಹುದ್ದೆಗೆ ಎಂ.ಎಸ್.ಸಿ ಕೃಷಿ ಅಥವಾ ಬಿ.ಎಸ್.ಸಿ ಕೃಷಿ ಪದವಿ ಹೊಂದಿರಬೇಕು, ಬ್ಲಾಕ್ ಮ್ಯಾನೇಜರ್ ಫಾರ್ಮ್ ಜೀವನೋಪಾಯ ಹುದ್ದೆಗೆ ಎಂ.ಎಸ್.ಸಿ ಕೃಷಿ ಅಥವಾ ಬಿ.ಎಸ್.ಸಿ ಕೃಷಿ ಪದವಿ ಹೊಂದಿರಬೇಕು., ಬ್ಲಾಕ್ ಮ್ಯಾನೇಜರ್ ಕೃಷಿಯೇತರ ಜೀವನೋಪಾಯ ಹುದ್ದೆಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು ಮತ್ತು ಕ್ಲಸ್ಟರ್ ಮೇಲ್ವಿಚಾರಕ ಕೌಶಲ್ಯ ಹುದ್ದೆಗೆ ಪದವಿ ಹೊಂದಿರಬೇಕು.
ಆಸಕ್ತರು ವೆಬ್ ಸೈಟ್ http://jobsksrlps.karnataka.gov.in ನಲ್ಲಿ ಜುಲೈ 15 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಎಸ್.ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ಭೇಟಿ ನೀಡಬಹುದು ಅಥವಾ ಸಂತೋಷ್ ಕುಮಾರ್ ರವರ ದೂರವಾಣಿ ಸಂಖ್ಯೆ 8884398469 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.