ಮನಸ್ಸಿನ ಕತೆಗಳು – 21 | ದೇಹದಲ್ಲಿ ಹುಳುಗಳಿವೆ ಅನ್ನುವ ಭ್ರಮೆ
ಅಯ್ಯೋ… ನಾನು ಸರ್ಜರಿ ಮಾಡಿ ಹುಳ ತೆಗೀತೀನಂತ ಈ ಮನುಷ್ಯನನ್ನು ಯಾರೋ ನನ್ನ ಬಳಿ ಕಳ್ಸಿದ್ದಾರಲ್ಲ ಅನ್ನಿಸಿ ನಾನು ಬೆಚ್ಚಿಬಿದ್ದೆ. “ನೋಡಿ… ನಾನು ಸರ್ಜರಿ ಮಾಡೋ ಡಾಕ್ಟರಲ್ ಅಲ್ಲ, ಬೇಕಾದ್ರೆ ನನಗೆ ಗೊತ್ತಿರೋ ಸರ್ಜನ್ ಬಳಿ ಕಳಿಸ್ತೀನಿ, ” ಅಂತ ನಾ ಹೇಳ್ತಿರುವಾಗಲೇ, ಆತನ ಹೆಂಡತಿ ಕಣ್ಸನ್ನೆ ಮಾಡಿ, ಸುಮ್ಮನಿರಿ ಅಂತ ಕೇಳಿಕೊಂಡಳು. ಅಷ್ಟರಲ್ಲಾತ ಹೆಂಡತಿ ಕಡೆ ತಿರುಗಿ, “ಏನೇ… ಇವ್ರು ಸರ್ಜರಿ ಮಾಡಲ್ವಂತಲ್ಲ, ಯಾವ ಡಾಕ್ಟ್ರ ಹತ್ರರ ಕರ್ಕೊಂಡ್ ಬಂದಿದಿಯ?” ಅಂತ ಸಿಟ್ಟಿನಿಂದ ಜೋರು ಮಾಡಿದ್ರು!