ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

0
51
Share this Article
0
(0)
Views: 1

ಬೆಂಗಳೂರು, ಜುಲೈ 03 

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಸಹಾಯಕ ಸೆಕ್ಷನ್ ಆಫೀಸರ್, ಲೆಕ್ಕ ಪರಿಶೋಧನಾ ಅಧಿಕಾರಿ, ಲೆಕ್ಕಪತ್ರ ಅಧಿಕಾರಿ, ಆದಾಯ ತೆರಿಗೆ, ಕೇಂದ್ರ ಅಬಕಾರಿ ಮತ್ತು ಸಿಬಿಐಸಿಯಲ್ಲಿ ಇನ್ಸ್‍ಪೆಕ್ಟರ್, ಇಡಿ ನಲ್ಲಿ ಎಇಒ ಮತ್ತು ಸಿಬಿಐ, ಸಿಬಿಎನ್ ನಲ್ಲಿ ಸಬ್-ಇನ್ಸ್‍ಪೆಕ್ಟರ್. ಅಂಚೆ ಇಲಾಖೆಯಲ್ಲಿ ಸಬ್‍ಇನ್ಸ್‍ಪೆಕ್ಟರ್, ಹಿರಿಯ ಸೆಕ್ರೆಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಗುಮಾಸ್ತ, ಅಂಚೆ ಸಹಾಯಕ/ ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

  ಅರ್ಜಿ ಸಲ್ಲಿಸುವವರ ವಿದ್ಯಾರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸÀಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಸಂದರ್ಶನ ಇರುವುದಿಲ್ಲ. ಅರ್ಜಿಯನ್ನು https://ssc.gov.in ಲಿಂಕ್‍ನಲ್ಲಿ ಜುಲೈ 24 ರೊಳಗೆ ಸಲ್ಲಿಸಬೇಕು.

  ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 080-25502520 ನ್ನು ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಂಪರ್ಕಿಸಬಹುದು. ಅಥವಾ ಎಸ್‍ಎಸ್‍ಸಿ ಮುಖ್ಯ ಕಚೇರಿ ನವದೆಹಲಿಯ ವೆಬ್‍ಸೈಟ್ https://ssc.gov.in ಮತ್ತು ಎಸ್‍ಎಸ್‍ಸಿ ಸ್ಥಳೀಯ ಕಚೇರಿ ಬೆಂಗಳೂರಿನ (ಕರ್ನಾಟಕ – ಕೇರಳ, ಲಕ್ಷ ದ್ವೀಪ ಪ್ರದೇಶದ ಪರೀಕ್ಷಾ ಕೇಂದ್ರಗಳು) ವೆಬ್‍ಸೈಟ್ www.ssckkr.kar.nic.in ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here