ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 19:-
ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಸುವರ್ಣ ಮಹೋತ್ಸವದ (1973-2023) ಅಂಗವಾಗಿ ‘ಮೀಡಿಯಾ ಎಜ್ಯುಕೇಷನ್: ಎ ಲೆಗಸಿ ಟು ಹೋಲ್ಡ್, ಎ ಫ್ಯುಚರ್ ಟು ಬಿಲ್ಡ್’(Media Education: A legacy to Hold, A Future to Build), ಎಂಬ ಧ್ಯೇಯದೊಂದಿಗೆ “ಮೀಡಿಯಾ ಸ್ಪಿಯರ್- 2024: ಭಾರತೀಯ ಮಾಧ್ಯಮ ಉದ್ಯಮದ ರೂಪಾಂತರ”(Media Sphere-2024: Metamorphosis Of Indian Media Industry), ವಿಷಯ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು, ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗ, ಇಂಡಿಯನ್ ಕಮ್ಯುನಿಕೇಷನ್ ಕಾಂಗ್ರೆಸ್(ಐಸಿಸಿ) ಹಾಗೂ ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಮತ್ತು ಸಂವಹನ ಶಿಕ್ಷಕರ ಸಂಘ (ಕೆಎಸ್ ಜೆಸಿಟಿಎ)ದ ಸಹಯೋಗದೊಂದಿಗೆ 2024ರ ಜುಲೈ 22 ರಂದು ಬೆಳಿಗ್ಗೆ 10:30 ಗಂಟೆಗೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಪ್ರೊ.ವೆಂಕಟಗಿರಿಗೌಡ ಮೆಮೋರಿಯಲ್ ಆಡಿಟೋರಿಯಂ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ. ಡಾ. ಜಯಕರ ಶೆಟ್ಟಿ ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಪ್ರೊ. ಎಸ್.ಆರ್. ನಿರಂಜನ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಬಿ.ಕೆ. ರವಿ ಅವರು ಪ್ರಮುಖ ಉಪನ್ಯಾಸ ನೀಡಲಿದ್ದಾರೆ.
ಭೂಪಾಲ್ ನ ಪತ್ರಿಕೋದ್ಯಮ ಮತ್ತು ಸಂವಹನದ ಮಖನ್ ಲಾಲ್ ಚತುರ್ವೇದಿ ರಾಷ್ಟ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ. ಕೆ.ಜಿ. ಸುರೇಶ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ. ನಿರಂಜನ ವಾನಳ್ಳಿ, ಕೊಲ್ಕತ್ತಾದ ವಿಶ್ವ ಭಾರತಿ ಕೇಂದ್ರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿರುವ ಪ್ರೊ. ಬಿಪ್ಲಾಬ್ ಲೋಹೋ ಚೌದರಿ, ಭುವನೇಶ್ವರ್ ದ ಉತ್ಕಲ್ ವಿಶ್ವವಿದ್ಯಾಲಯದ ಐಎಮ್ಎಸ್ ನ ನಿರ್ದೇಶಕರಾದ ಪ್ರೊ. ಉಪೇಂದ್ರ ಪಡಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಶೈಕ್ ಲತೀಫ್, ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಶ್ರೀನಿವಾಸ್ ಚೌಡಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ಹಣಕಾಸು ವಿಭಾಗದ ಅಧಿಕಾರಿ ಡಾ. ಸುನೀತಾ ಎಂ. ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಸುವರ್ಣ ಮಹೋತ್ಸವ ಹಾಗೂ ಒಂದು ದಿನದ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭವು ಜುಲೈ 22 ರಂದು ಸಂಜೆ 4:00 ಗಂಟೆಗೆ ನಡೆಯಲಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಬಿ. ಶೈಲಶ್ರೀ, ಪ್ರಾಧ್ಯಾಪಕರಾದ ಡಾ. ಎನ್. ಸಂಜೀವ ರಾಜ, ಸಹಾಯಕ ಪ್ರಾಧ್ಯಾಪಕರಾದ ಡಾ. ವಸುಂಧರಾ ಪ್ರಿಯದರ್ಶಿನಿ ಎಂ, ಸೇರಿದಂತೆ ಸಂವಹನ ವಿಭಾಗದ ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.