ಕೃಷಿ ವಿಶ್ವವಿದ್ಯಾನಿಲಯದಲ್ಲಿ “ಸ್ನಾತಕೋತ್ತರ ವಿಜ್ಞಾನ ಸಪ್ತಾಹ – 2024” ರ ಉದ್ಘಾಟನೆ

0
39
Share this Article
0
(0)
Views: 1

 

ಬೆಂಗಳೂರು, ಆಗಸ್ಟ್ 06

ಸ್ನಾತಕೋತ್ತರ ಅಧ್ಯಯನ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರು ಹಮ್ಮಿಕೊಂಡಿದ್ದ “ಸ್ನಾತಕೋತ್ತರ ವಿಜ್ಞಾನ ಸಪ್ತಾಹ 2024”ರ ಉದ್ಘಾಟನಾ ಕಾರ್ಯಕ್ರಮವನ್ನು ಇಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ.ಸುರೇಶ ಅವರು ಮಾತನಾಡಿ ಸಂಶೋಧನೆ ಬದುಕಿನ ಒಂದು ಕ್ರಮ. ಇಂದಿನ ಸಂಶೋಧನೆಗಳು ಭವಿಷ್ಯದ ಅಭಿವೃದ್ಧಿಗೆ ಬುನಾದಿ. ಯುವ ಜನತೆ ಸಂಶೋಧನೆಗಳ ಬಗ್ಗೆ ಹೆಚ್ಚು ಒತ್ತು ನೀಡಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವತ್ತ ಹೆಚ್ಚು ಗಮನವಹಿಸಬೇಕು ಎಂದರು.

ವಿಜ್ಞಾನ ಸಪ್ತಾಹವು ಸಂಶೋಧನೆಯ ಮೂಲಭೂತ ಹಾಗೂ ಅನ್ವಯಿಕ ಆಯಾಮಗಳೆರಡನ್ನೂ ಪರಿಚಯಿಸುವುದರ ಜೊತೆಗೆ ಪರಿಣಾಮಕಾರಿ ಸಂವಹನ ಪ್ರಾವೀಣ್ಯತೆಯನ್ನು ಸಾಧಿಸಲು ನೆರವಾಗುತ್ತದೆ. ಕೃಷಿಯು ವೈಜ್ಞಾನಿಕ ಜ್ಞಾನವನ್ನು ಸಂಯೋಜಿಸಿ ವರ್ಗಾಯಿಸುವಲ್ಲಿ ಸಹಕಾರಿಯಾಗುತ್ತದೆÉ. ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ 2014 ರಿಂದ ಪ್ರಾರಂಭವಾದ ಈ ವಿಜ್ಞಾನ ಕಾರ್ಯಕ್ರಮವು ಇಂದು ಕೃವಿವಿ, ಬೆಂಗಳೂರಿನ ಪ್ರತಿಷ್ಠಿತ ವಾರ್ಷಿಕ ಕಾರ್ಯಕ್ರಮವಾಗಿ ಬೆಳೆದಿದೆ ಮತ್ತು ಬಲವಾದ ವೈಜ್ಞಾನಿಕ ತತ್ತ್ವಶಾಸ್ತ್ರ ಹಾಗೂ ಕಠಿಣ ಮೌಲ್ಯಮಾಪನ ಪ್ರಕ್ರಿಯೆಗಾಗಿ ಗುರುತಿಸಲ್ಪಟ್ಟಿದೆ. ಇದು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನಾ ಪ್ರಯತ್ನಗಳು ಮತ್ತು ಆವಿಷ್ಕಾರಗಳನ್ನು ಪ್ರಸ್ತುತಪಡಿಸಲು ಒಂದು ವೈಶಿಷ್ಟ ವೇದಿಕೆಯನ್ನು ಒದಗಿಸಿ ಭಾರತದ ಇನ್ನಿತರೆ ಕೃಷಿ ವಿಶ್ವವಿದ್ಯಾನಿಲಯಗಳ ಮೆಚ್ಚುಗೆಯನ್ನು ಗಳಿಸಿದೆ.

ಈ ವಿಚಾರ ಸಂಕಿರಣವು ಕೃಷಿ ವಿಜ್ಞಾನದ ತಿಳುವಳಿಕೆಯನ್ನು ಹೆಚ್ಚಿಸುವುದರ ಜೊತೆಗೆ ಪರಿಣಾಮಕಾರಿ ಸಂವಹನ ಕೌಶಲ್ಯಗಳನ್ನು ಹದಗೊಳಿಸುವುದರ ಮೂಲಕ ಸಂಶೋಧನಾ ಉತ್ಕøಷ್ಟತೆಯನ್ನು ಪ್ರೇರೇಪಿಸುವ ಹಾಗೂ ಪೋಷಿಸುವ ಗುರಿಯನ್ನು ಹೊಂದಿದೆ, ಮುಂದಿನ ದಿನಗಳಲ್ಲಿ ಅಂತರ ಕೃಷಿ ವಿಶ್ವವಿದ್ಯಾನಿಲಯಗಳ ವಿಜ್ಞಾನ ಸಪ್ತಾಹವನ್ನಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿಸಂಶೋಧನೆಗಳ ಫಲಶೃತಿಗಳನ್ನು ಇತರೆ ಕೃಷಿ ವಿಶ್ವವಿದ್ಯಾನಿಲಯಗಳ ಜೊತೆ ಹಂಚಿಕೊಳ್ಳಲು ವೇದಿಕೆಯನ್ನು ಕಲ್ಪಿಸುತ್ತದೆ.

ವೈಜ್ಞಾನಿಕ ಅನ್ವೇಷಣೆಯು ಕುತೂಹಲತೆಯಲ್ಲಿ ಅಡಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ವೈಚಾರಿಕತೆಯನ್ನು ಓರೆಹಚ್ಚುವ ಮೂಲಕ ಹೊಸ ಅನ್ವೇಷಣೆಗಳಿಗೆ ಮುಂದಾಗಬೇಕು ಎಂದು ಕರೆಯಿತ್ತರು.

 ಡೀನ್ (ಸ್ನಾತಕೋತ್ತರ ಅಧ್ಯಯನ) (ವಿಶ್ರಾಂತ) ಹಾಗೂ ಖ್ಯಾತ ಕಾದಂಬರಿಕಾರರಾದ ಡಾ. ಕೆ.ಎನ್.ಗಣೇಶಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದ ಅರು ಪ್ರಸ್ತ್ತುತ ಪರಿಸ್ಥಿತಿಯಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲೂ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.ಮಹಿಳೆಯರು ಆರ್ಥಿಕ, ರಾಜಕೀಯ, ಕ್ರೀಡೆ, ರಕ್ಷಣಾ ಕ್ಷೇತ್ರ, ವಿಶೇಷವಾಗಿ ವಿಜ್ಞಾನ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವರ ತಾಳ್ಮೆ, ಧೈರ್ಯ, ಉತ್ಸಾಹ ಮತ್ತು ನೈಪುಣ್ಯತೆಯಿಂದ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬಲ್ಲರು, ವೈಚಾರಿಕ ಕಟ್ಟುಪಾಡುಗಳಿಂದ ಹೊರಬಂದು ವೈಜ್ಞಾನಿಕ ರೀತಿಯಲ್ಲಿ ಚಿಂತಿಸಿ ಪ್ರಗತಿಯ ಪಥದಲ್ಲಿ ಸಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕರಾದ ಡಾ. ಕೆ.ಸಿ. ನಾರಾಯಣಸ್ವಾಮಿ, ಜಿಕೆವಿಕೆಯ ಅಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here