Views: 11
ಬೆಂಗಳೂರು ನಗರ ಜಿಲ್ಲೆ, ಆಗಸ್ಟ್ 17
ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಕ್ಕೆ ಗೌರವ ಧನದ ಆಧಾರದ ಮೇಲೆ ಸಂದರ್ಶನದ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
1.ಕಂಪ್ಯೂಟರ್ ಆಪರೇಟರರ- ವಿದ್ಯಾರ್ಹತೆ: ಪಿಯುಸಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 2.ಫಿಜಿಯೋಥೆರಪಿಸ್ಟ್/ ಆಕ್ಯುಪೇಶನಲ್ ಥೆರಪಿಸ್ಟ್ (ಪೂರ್ಣಾವಧಿ)- ವಿದ್ಯಾರ್ಹತೆ: ಫಿಜಿಯೋಥೆರಪಿ ಪದವಿ ಹೊಂದಿರಬೇಕು ಆಕ್ಯುಪೇಶನಲ್ ಥೆರಪಿ. 3. ಲೆದರ್ ವರ್ಕರ್ / ಶೂ ಮೇಕರ್ ಹುದ್ದೆ ವಿದ್ಯಾರ್ಹತೆ: ಲೆದರ್ ವರ್ಕ್ ಮತ್ತು ಶೂ ಮೇಕಿಂಗ್ ನಲ್ಲಿ 2 ವರ್ಷ ಅನುಭವ ಮತ್ತು ಪ್ರಮಾಣ ಪತ್ರವನ್ನು ಹೊಂದಿರಬೇಕು. 4 ಸ್ಪೀಚ್ ಥೆರಪಿಸ್ಟ್ ಮತ್ತು ಆಡಿಯಾಲಿಜಿಸ್ಟ್ ಹುದ್ದೆ, ವಿದ್ಯಾರ್ಹತೆ: ಭಾಷಣ ಮತ್ತು ಶ್ರವಣಶಾಸ್ತ್ರದಲ್ಲಿ ಬಿಎಸ್ಸಿ ಪದವಿ. 5. ಮೊಬಿಲಿಟಿ ಇನ್ಸ್ ಟ್ರಕ್ಟರ್ ಹುದ್ದೆ, ವಿದ್ಯಾರ್ಹತೆ: ಸರ್ಟಿಫಿಕೇಟ್ ಕೋರ್ಸ್ ಇನ್ ಓ&ಎಮ್. 6. ಇಯರ್ ಮೊಲ್ಡ್ ಟೆಕ್ನಿಷಿಯನ್, ವಿದ್ಯಾರ್ಹತೆ: ಇಯರ್ ಮೊಲ್ಡ್ ಟೆಕ್ನಾಲಕಿಯಲ್ಲಿ ಸರ್ಟಿಫಿಕೇಟ್ ಕೋರ್ಸ್. 7.ಕೀಲು ಮತ್ತು ಮೂಳೆ ತಜ್ಞರು, ವಿದ್ಯಾರ್ಹತೆ: ಆರ್ಥೋಪೆಡಿಕ್ಸ್ ನಲ್ಲಿ ಸ್ನಾತಕೋತ್ತರ ಅಥವಾ ಡಿಪ್ಲೊಮಾ ಪದವಿ ಹೊಂದಿರಬೇಕು. 8. ಆಪ್ಥಮಾಲಜಿಸ್ಟ್ ವಿದ್ಯಾರ್ಹತೆ: ಆಪ್ಥಮಾಲಜೀಯಲ್ಲಿ ಸ್ನಾತಕೋತ್ತರ ಅಥವಾ ಡಿಪ್ಲೊಮಾ ಪದವಿ ಹೊಂದಿರಬೇಕು. 9. ಇ.ಎನ್.ಟಿ ಸ್ಪೆಷಲಿಸ್ಟ್ , ವಿದ್ಯಾರ್ಹತೆ: ಇ.ಎನ್.ಟಿ ಯಲ್ಲಿ ಸ್ನಾತಕೋತ್ತರ ಅಥವಾ ಡಿಪ್ಲೊಮಾ ಪದವಿ. 10. ಸೈಕಿಯಾಟ್ರಿಸ್ಟ್ ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ ಅಥವಾ ಸೈಕಿಯಾಟ್ರಿ ಮೆಡಿಸಿನ್. 11. ಕೃತಕಾಂಗ ಜೋಡಣೆ ಪಿ&ಓ ಅಭಿಯಂತಕರು, ವಿದ್ಯಾರ್ಹತೆ: ಪಿ&ಓ ಇಂಜಿನಿಯರ್ ಪದವಿ/ ಡಿಪ್ಲೊಮಾ 2 ರಿಂದ 5 ವರ್ಷ ಅನುಭವ ಹೊಂದಿರಬೇಕು.
ಅಭ್ಯರ್ಥಿಗಳು 18-45 ವರ್ಷಗಳ ವಯೋಮಿತಿಯಲ್ಲಿರಬೇಕು. ಆರ್ಹ ಆಭ್ಯರ್ಥಿಗಳು ಹುದ್ದೆ ಮತ್ತು ವಿದ್ಯಾರ್ಹತೆಗನುಗುಣವಾಗಿ ಸ್ವವಿವರದೊಂದಿಗೆ ಅರ್ಜಿ ತಯಾರಿಸಿ ಅಗತ್ಯ ದಾಖಲೆಗಳೊಂದಿಗೆ ಅಧ್ಯಕ್ಷರು/ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ರವಿ ಕಿರ್ಲೋಸ್ಕರ್ ಆಸ್ಪತ್ರೆ ಆವರಣ, ಪೀಣ್ಯ 1ನೇ ಹಂತ ಬೆಂಗಳೂರು ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಆಗಸ್ಟ್ 26ರ ಸಂಜೆ 5 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8431308600, 9164496483 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಅಧ್ಯಕ್ಷರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.