Views: 1
ಬೆಂಗಳೂರು, ಆಗಸ್ಟ್ 27
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಾ ಬಂದಿದೆ.
ಸದ್ಯ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೆಲಮಂಗಲದಿಂದ ಸೊಂಡೆಕೊಪ್ಪ, ತಾವರಕೆರೆ, ಸುಂಕದ ಕಟ್ಟೆ ಮಾರ್ಗವಾಗಿ ಸುಮನಹಳ್ಳಿ ಜಂಕ್ಷನ್ ವರಗೆ ಮಾರ್ಗ ಸಂಖ್ಯೆ 374 ಎಸ್ ಹಾಗೂ ನೆಲಮಂಗಲದಿಂದ ಮಾದನಾಯಕನಹಳ್ಳಿ, ಗಂಗೊಂಡನಹಳ್ಳಿ, ಕಾಚೋಹಳ್ಳಿ, ಗೊಲ್ಲರಹಟ್ಟಿ, ಕನ್ನಲ್ಲಿ, ಸೂಲಿಕೆರೆ ಮಾರ್ಗವಾಗಿ ಕೆಂಗೇರಿ ಬಸ್ ನಿಲ್ದಾಣದ ವರೆಗೆ ಮಾರ್ಗ ಸಂಖ್ಯೆ 516 ನ್ನು ನೂತನವಾಗಿ ಪರಿಚಯಿಸಿದೆ. ಸಾರ್ವಜನಿಕರು ಈ ಸೌಲಭ್ಯದ ಉಪಯೋಗವನ್ನು ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.