ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 04
2024-25ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯ ಶಾಲೆಗಳಲ್ಲಿ ಓದುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಧರ್ಮದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ) https://ssp.prematric .karnataka.gov.in SSP-State scholarship portal) https://dom.karnataka.gov.in (ಅಲ್ಪಸಂಖ್ಯಾತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ) ವೆಬ್ ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿನ್ನು ಭರ್ತಿ ಮಾಡುವುದು. ಅರ್ಜಿ ಸಲ್ಲಿಸುವ ವೇಳೆ ತಾಂತ್ರಿಕ ತೊಂದರೆಯಾದಾಗ ಅಲ್ಪಸಂಖ್ಯಾತರ ಜಿಲ್ಲಾ ಹಾಗೂ ತಾಲ್ಲೂಕು ಮಾಹಿತಿ ಕೇಂದ್ರಗಳಲ್ಲಿರುವ ಹೆಲ್ಪ್ ಡೆಸ್ಕ್ (Help Desk) ಸಹಾಯವಾಣಿ ಸಂಖ್ಯೆ: 8277799990 ನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿದಾರರ ವಾರ್ಷಿಕ ಆದಾಯ ರೂ. 1.00 ಲಕ್ಷ ಮಿತಿಯೊಳಗೆ ಇರತಕ್ಕದ್ದು, ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸತಕ್ಕದ್ದು, ವಿದ್ಯಾರ್ಥಿಗಳು ಆಯಾ ಅರ್ಜಿಗಳೊಂದಿಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಹಿಂದಿನ ತರಗತಿಯಲ್ಲಿ ತೇರ್ಗಡೆ ಹೊಂದಿದ ತರಗತಿಯ ಅಂಕ ಪಟ್ಟಿ, ಶಾಲೆಗೆ ಪಾವತಿಸಿದ ಶುಲ್ಕ ರಸೀದಿ, ಆಧಾರ್ ಸಂಖ್ಯೆ ಮತ್ತು ಇತರೆ ಅವಶ್ಯ ದಾಖಲಾತಿಗಳನ್ನು ಆನ್ಲೈನ್ ಕಾಫಿಗೆ ಲಗತ್ತಿಸುವುದು. ಮತ್ತು ದಾಖಲಾತಿಗಳನ್ನು ಮುಖ್ಯೋಪಾಧ್ಯಾಯರಿಂದ ಪರಿಶೀಲಿಸಿ ದೃಢೀಕರಿಸಿ ಕಡ್ಡಾಯವಾಗಿ ಶಾಲೆಯಿಂದ ಆನ್ಲೈನ್ ಮೂಲಕ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಿರ್ದೇಶನಾಲಯಕ್ಕೆ ವರ್ಗಾಯಿಸುವುದು.
ಅರ್ಜಿ ಸಲ್ಲಿಸಲು ಅಕ್ಟೊಬರ್ 31 ಕೊನೆಯ ದಿನವಾಗಿದ್ದು, ದೃಢೀಕೃತ ಹಾರ್ಡ್ ಕಾಪಿಯನ್ನು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಸಂಬಂಧಿಸಿದ ತಾಲ್ಲೂಕು ಉರ್ದು ಸಿಆರ್ಪಿಗಳಿಗೆ ಸಲ್ಲಿಸುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.