ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ಎಸ್ಟಿಮ್ ಮಾಲ್ ನಿಂದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ರಸ್ತೆ ಗುಂಡಿಗಳ ಪರಿಶೀಲನೆ ನಡಿಸಿದರು.
ಪರಿಶೀಲನೆಯ ವೇಳೆ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಹೇಶ್ವರ್ ರಾವ್, ವಲಯ ಆಯುಕ್ತರಾದ ಕರೀಗೌಡ, ಸ್ನೇಹಲ್, ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಶೀಲನೆಯ ಪ್ರಮುಖ ಅಂಶಗಳು:
ಹೆಬ್ಬಾಳ:
ಹೆಬ್ಬಾಳ ವ್ಯಾಪ್ತಿಯಲ್ಲಿ ವಾಟರ್ ಲಾಗಿಂಗ್ ಆಗದಂತೆ ಪೈಪ್ ಲೈನ್ ಅಳವಡಿಸಲಾಗಿದೆ ಹಾಗೂ ನೀರು ಸರಾಗವಾಗಿ ಹರಿದು ಹೋಗಲು ಗ್ರೇಟಿಂಗ್ ಗಳ ಅಳವಡಿಕೆ ಮಾಡಲಾಗಿದೆ. ಗ್ರೇಟಿಂಗ್ ನಲ್ಲಿ ಬಂದು ಸೇರುವ ತ್ಯಾಜ್ಯವನ್ನು ಆಗಿಂದ್ದಾಗ್ಗೆ ತೆರವು ಮಾಡಲಾಗುತ್ತಿರುತ್ತದೆ.
ರಾಜಕಾಲುವೆ ಬಳಿ ಮೆಟ್ರೋ ಪಿಲ್ಲರ್ ಕಾಮಗಾರಿ ಪ್ರಗತಿಯಲ್ಲಿದ್ದು, ಪಾದಚಾರಿಗಳಿ ಓಡಾಟಕ್ಕೆ ಸಮಸ್ಯೆಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮೆಟ್ರೋ ಅಧಿಕಾರಿಗಳಿಗೆ ಸೂಚನೆ
ಪಾದಚಾರಿ ಮಾರ್ಗದಲ್ಲಿ ಸ್ಲ್ಯಾಬ್ಸ್ ಹಾಳಾಗಿದ್ದು, ಅದನ್ನು ಸರಿಪಡಿಸಲು ಸೂಚನೆ.
ರಸ್ತೆ ಸರ್ಫೇಸ್ ಹಾಳಾಗಿದ್ದು, ಕೂಡಲೆ ಮಿಲ್ಲಿಂಗ್ ಮಾಡಿ ಡಾಂಬರೀಕರಣ ಮಾಡಲು ಸೂಚನೆ.
ಎಸ್ಟಿಮ್ ಮಾಲ್ ಕಡೆಯಿಂದ ಕೆ.ಆರ್ ಪುರಂ ಕಡೆ ಹೋಗುವ ಕಡೆ ಸ್ವಚ್ಛತೆ ಕಾಪಾಡದಿರುವುದನ್ನು ಕಂಡು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಂದ ಸ್ವಚ್ಛತೆ ಮಾಡಿಸಲು ಸೂಚನೆ.
ಕರಿಯಣ್ಣನ ಪಾಳ್ಯ, ಯೋಗೇಶ್ವರ ಬಸ್ ನಿಲ್ದಾಣ ಬಳಿ ಪರಿಶೀಲನೆ:
ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಚನೆ
ಪಾದಚಾರಿ ಮಾರ್ಗ ಸರಿಪಡಿಸಲು ಸೂಚನೆ
ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವುದರ ಜೊತೆಗೆ ಅಗತ್ಯ ಕಾಮಗಾರಿ ನಡೆಸಿ ಸಮಸ್ಯೆ ಸರಿಪಡಿಸಲು ಪ್ರಧಾನ ಅಭಿಯಂತರರಿಗೆ ಸೂಚನೆ
ಪಾದಚಾರಿ ಮಾರ್ಗದಲ್ಲಿ ಶೋಲ್ಡರ್ ಡ್ರೈನ್ ಸ್ವಚ್ಛ ಮಾಡಿದ್ದು, ಅದರ ಮೇಲೆ ಕೂಡಲೆ ಸ್ಲ್ಯಾಬ್ಸ್ ಅಳವಡಿಸಲು ಸೂಚನೆ
ರಸ್ತೆ ಮದ್ಯೆಯಿರುವ ಮೀಡಿಯನ್ ಸ್ವಚ್ಚತೆ ಕಾಪಾಡದಿರುವುದನ್ನು ಗಮನಿಸಿ ಕೂಡಲೆ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
ವೀರಣ್ಣ ಪಾಳ್ಯ ಮೇಲ್ಸೇತುವೆ ಹತ್ತಿರ ಪರಿಶೀಲನೆ:
ಮೇಲ್ಸೇತುವೆ ಬಳಿ ಅಳವಡಿಸಿದ್ದ ಬೃಹತ್ ನಾಮಫಲಕವನ್ನು ಪಾದಚಾರಿ ಮಾರ್ಗದಲ್ಲಿ ಹಾಕಿದ್ದು, ಅದನ್ನು ಕೂಡಲೆ ತೆರವುಗೊಳಿಸಲು ಸೂಚನೆ.
ಬೀದಿ ದೀಪಗಳನ್ನು ಅಳವಡಿಸಬೇಕಿದ್ದು, ಕೂಡಲೆ ಅಳವಡಿಸಲು ಸೂಚನೆ
ಮೇಲ್ಸೇತುವೆ ಬದಿಯ ಸರ್ವೀಸ್ ರಸ್ತೆ ಹಾಳಾಗಿದ್ದು, ಇಂದು ರಾತ್ರಿಯೇ ಡಾಂಬರೀಕರಣ ಮಾಡಲು ಸೂಚನೆ
ವೀರಣ್ಣ ಪಾಳ್ಯ ಜಂಕ್ಷನ್ ಬಳಿ ಮಳೆ ಬಂದ ವೇಳೆ ನೀರು ನಿಲ್ಲುತ್ತಿದ್ದು, ಅದನ್ನು ಸರಿಪಡಿಸಲಾಗಿದೆ. ಆದರೆ, ಸೈಡ್ ಡ್ರೈನ್ ಮೆಲೆ ಸ್ಲ್ಯಾಬ್ ಅಳವಡಿಸದೇ ಇರುವುದನ್ನು ಕಂಡು ಅದನ್ನು ಅಳವಡಿಸಲು ಸೂಚನೆ.
ವೀರಣ್ಣ ಪಾಳ್ಯ ಜಂಕ್ಷನ್ ನಲ್ಲಿ ಮೆಟ್ರೋ ಇಲಾಖೆಯಿಂದ ಡಾಂಬರೀಕರಣ ಮಾಡಲು ಸೂಚನೆ.