ಬಿ.ಎಂ.ಟಿ.ಸಿ ಯಿಂದ ಹೊಸ ಮೆಟ್ರೋ ಫೀಡರ್ ಮಾರ್ಗ ಪರಿಚಯ

0
443
Share this Article
0
(0)
Views: 400

ಬೆಂಗಳೂರು, ಸೆಪ್ಟೆಂಬರ್ 21

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣರಹಿತ ಸೇವೆಯಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ಸೆಪ್ಟೆಂಬರ್ 23 ರಿಂದ ಪರಿಚಯಿಸಲಾಗುತ್ತಿದೆ. ಮಾರ್ಗ ಸಂಖ್ಯೆ 18 ಬನಶಂಕರಿ ಬಸ್ ನಿಲ್ದಾಣದಿಂದ ಆರ್.ವಿ.ಮೆಟ್ರೋ ನಿಲ್ದಾಣ, ಜಯನಗರ ಮೆಟ್ರೋ ನಿಲ್ದಾಣ, ಜಯನಗರ ಬಸ್ ನಿಲ್ದಾಣ, ಕಾರ್ಮಲ್ ಕನ್ವೆಂಟ್, ಜಯನಗರ 9ನೇ ಬ್ಲಾಕ್ ಈಸ್ಟ್, ಬಿಳೇಕಹಳ್ಳಿ, ಹುಳಿಮಾವು ಗೇಟ್, ಗೊಟ್ಟಿಗೆರೆ, ಬಸವಂತಪುರ ಗೇಟ್, ಕೋಳಿಫಾರ್ಮ್ ಗೇಟ್‍ವರೆಗೆ 4 ಬಸ್ಸುಗಳು, 56 ಸುತ್ತುವಳಿಗಳಲ್ಲಿ ಸೇವೆಯನ್ನು ಒದಗಿಸಲಿವೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here