ಬೆಂಗಳೂರು, ಸೆಪ್ಟೆಂಬರ್ 25
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾದ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಪರಿವೀಕ್ಷಕರ 15 (ಹೈ.ಕ.ವೃಂದ) ಹುದ್ದೆಗಳಿಗೆ ಅಕ್ಟೋಬರ್ 4 ರಂದು ಮೂಲ ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುತ್ತಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಹಾಗೂ ಇ-ಮೇಲ್ ರವಾನಿಸಲಾಗಿದೆ. ಅಲ್ಲದೇ ಮೂಲ ದಾಖಲೆ ಪರಿಶೀಲನೆಗೆ ನಿಗದಿಪಡಿಸಲಾದ ದಿನಾಂಕ/ಸಮಯವಾರು ಅಭ್ಯರ್ಥಿಗಳ ವೇಳಾ ಪಟ್ಟಿಯನ್ನು ಆಯೋಗದ ವೆಬ್ ಸೈಟ್‍ನಲ್ಲಿ, ಪ್ರಕಟಿಸಿದ್ದು, ಅದರಂತೆ ಅಭ್ಯರ್ಥಿಗಳು ಹಾಜರಾಗಲು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.