ಪರಿಷ್ಕೃತ ಅಂಗವೈಕಲ್ಯ ಮೌಲ್ಯಮಾಪನ ಮಾರ್ಗಸೂಚಿಗಳ ಕುರಿತು ತರಬೇತಿ

0
249
Share this Article
0
(0)
Views: 233

ಬೆಂಗಳೂರು, ಅಕ್ಟೋಬರ್ 01

ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ, ಭಾರತದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ, ಪರಿಷ್ಕೃತ ಅಂಗವೈಕಲ್ಯ ಮೌಲ್ಯಮಾಪನ ಮಾರ್ಗಸೂಚಿಗಳ ಕುರಿತು ತರಬೇತಿ ಕಾರ್ಯಕ್ರಮದ 4 ನೇ ಬ್ಯಾಚ್ ಅನ್ನು ಬೆಂಗಳೂರಿನ  ಇನ್ಸಿಟಿಟ್ಯೂಟ್ ಆಫ್ ಸೈನ್ಸಸ್‍ನ ಎ.ವಿ. ರಾಮರಾವ್ ಆಡಿಟೋರಿಯಂನಲ್ಲಿ  ಹಮ್ಮಿಕೊಳ್ಳಲಾಗಿತ್ತು.

DEPwD ಜಂಟಿ ಕಾರ್ಯದರ್ಶಿ ರಾಜೀವ್ ಶರ್ಮಾ ಮಾತನಾಡಿ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಾದ್ಯಂತ ವೈದ್ಯಕೀಯ ವೃತ್ತಿಪರರಿಗೆ ತರಬೇತಿ ನೀಡುವ ಗುರಿಯೊಂದಿಗೆ 2024 ನೇ ಮಾರ್ಚ್ 12 ರಂದು ತಿಳಿಸಲಾದ ಪರಿಷ್ಕೃತ ಅಂಗವೈಕಲ್ಯ ಮೌಲ್ಯಮಾಪನ ಮಾರ್ಗಸೂಚಿಗಳನ್ನು ಜಾರಿಗೆ ತರಲು ಮತ್ತು ಮಾರ್ಚ್ 14, 2024 ರಂದು ಸರ್ಕಾರದ ಅಧಿಕೃತ ಇ-ಗೆಜೆಟ್‍ನಲ್ಲಿ ಪ್ರಕಟಿಸಲಾಗಿದೆ. ಭಾರತವು ಅಂಗವೈಕಲ್ಯ ಮೌಲ್ಯಮಾಪನಕ್ಕೆ ಸಮಗ್ರ ವಿಧಾನವನ್ನು ಒತ್ತಿಹೇಳುತ್ತದೆ ಎಂದರು.
ಪರಿಷ್ಕೃತ ಯುಡಿಐಡಿ ಮೌಲ್ಯಮಾಪನ ಮಾರ್ಗಸೂಚಿಗಳ ಪ್ರಮುಖ ಮುಖ್ಯಾಂಶಗಳಾದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮುಖ್ಯ ವೈದ್ಯಕೀಯ ಅಧಿಕಾರಿಗಳು (CMO ಗಳು) ಮತ್ತು ವೈದ್ಯಕೀಯ ಅಧೀಕ್ಷಕರು ಸೇರಿದಂತೆ ವೈದ್ಯಕೀಯ ವೃತ್ತಿಪರರ ಪ್ರತಿಕ್ರಿಯೆಯ ಆಧಾರದ ಮೇಲೆ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು. ರಕ್ತದ ಅಸ್ವಸ್ಥತೆಗಳನ್ನು ಶಾಶ್ವತ ಅಂಗವೈಕಲ್ಯವೆಂದು ಗುರುತಿಸುವುದು ಸೇರಿದಂತೆ ಪಿಡಬ್ಲ್ಯೂಡಿ ಗಳಿಗೆ ಸುಲಭವಾಗಿ ಬದುಕಲು ಪ್ರಮಾಣೀಕರಣ ಪ್ರಕ್ರಿಯೆಗಳ ಸರಳೀಕರಣಗೊಳಿಸುವುದು. NIEPID ಯ ಇಂಡಿಯನ್ ಟೆಸ್ಟ್ ಆಫ್ ಇಂಟೆಲಿಜೆನ್ಸ್ (ITI) ನಂತಹ ಸ್ಥಳೀಯ ಪರೀಕ್ಷಾ ವಿಧಾನಗಳ ಸಂಯೋಜನೆ ಕುರಿತ ವಿಷಯಗಳ ಬಗ್ಗೆ ತರಬೇತಿಯಲ್ಲಿ ಚರ್ಚಿಸಲಾಯಿತು.
ಆಯಾ ವಿಕಲಾಂಗತೆಗಳ ತಜ್ಞರಾದ ದೆಹಲಿ AIIMS ನ ಡಾ. ಶೆಫಾಲಿ ಗುಲಾಟಿ, ದೆಹಲಿಯ  LHMC ಡಾ. ಅರುಣಾಭ ಚಕ್ರವರ್ತಿ, ದೆಹಲಿಯ RMLH ಡಾ. ಮಿನಾ ಚಂದ್ರ, ಮುಂಬೈನ AIIPMR ಡಾ. ಸುಮೇಧ್ ನಾರಾಯಣ ಮೋರೆ, ದೆಹಲಿಯ RMLH ಡಾ. ಹರಿ ಪ್ರಕಾಶ್ ಪುರಿ, ಭೋಪಾಲ್‍ನ AIIMS ಡಾ. ಭಾವನಾ ಧಿಂಗ್ರಾ, ದೆಹಲಿಯ AIIMS  ಡಾ. ಆರಾಧನಾ, ದೆಹಲಿಯ LHMC ಪ್ರಭಾಕರ್ ಉಪಾಧ್ಯಾಯ ಇವರು ಪರಿಷ್ಕೃತ ಮೌಲ್ಯಮಾಪನ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಿದಂತೆ ಸೂಕ್ಷ್ಮ ವ್ಯತ್ಯಾಸಗಳನ್ನು ಹೈಲೈಟ್ ಮಾಡಿದರು ಮತ್ತು ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಸುಮಾರು 850 ವೈದ್ಯಕೀಯ ವೃತ್ತಿಪರರು ಪರಿಷ್ಕøತ ಅಂಗವೈಕಲ್ಯ ಮೌಲ್ಯಮಾಪನ ಮಾರ್ಗಸೂಚಿಗಳ ಕುರಿತು ತರಬೇತಿ ಪಡೆದುಕೊಂಡರು.
 
 
ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರಾದೇಶಿಕ ಅಧಿಕಾರಿ, ಹಾಗೂ ಹಿರಿಯ CMO (SAG)  ಡಾ. ಸ್ಮಿತಾ ರಾವತ್ ಸ್ವಾಗತಿಸಿದರು.ತರಬೇತಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್‍ನ ಡೀನ್ ಪ್ರೊ. ಜಿ ಮುಗೇಶ್,  DEPwD ನಿರ್ದೇಶಕ ವಿನೀತ್ ಸಿಂಘಾಲ್ ಮತ್ತಿತರರು ಉಪಸ್ಥಿತರಿದ್ದರು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here