ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ಪೂರ್ವ-1-1, ಪೂರ್ವ-2-1, ಆಗ್ನೇಯ -1, ಆಗ್ನೇಯ -4, ಪಶ್ಚಿಮ -1-1, ಪಶ್ಚಿಮ -2-1, ವಾಯುವ್ಯ – 1, ವಾಯುವ್ಯ – 3, ಕೇಂದ್ರ-1-1 ಈಶಾನ್ಯ – 1 ಮತ್ತು ಉತ್ತರ-1-1, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅಕ್ಟೋಬರ್ 3 ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ.
Views: 298
ಬೆಂಗಳೂರು, ಅಕ್ಟೋಬರ್ 1
ಎ.ಇ.ಸಿ.ಎಸ್ – 1 ಮತ್ತು 2, ಹೂಡಿ, ಹೆಚ್.ಬಿಆರ್.ಲೇಔಟ್, ಕಾಚರಕನಹಳ್ಳಿ, ಕಲ್ಯಾಣನಗರ, ಜೀವನ್ ಭೀಮಾನಗರ, ಹೆಚ್.ಎ.ಎಲ್ 2ನೇ ಹಂತ, ಇಂದಿರಾನಗರ, ಬೈಯ್ಯಪ್ಪನಹಳ್ಳಿ, ಸಿ.ವಿ.ರಾಮನ್‍ನಗರ, ಸದಾನಂದನಗರ, ಮಾಗಡಿ ರಸ್ತೆ – 1,2, ಹೊಸಹಳ್ಳಿ ಪಂಪ್ ಹೌಸ್, ಮೈಸೂರು ರಸ್ತೆ, ಕೆಂಗೇರಿ, ಐಡಿಯಲ್ ಹೋಮ್ಸ್, ಬಿ.ಜಿ.ಎಂ.ಎಲ್ ಲೇಔಟ್, ಆರ್.ಆರ್.ನಗರ, ಕೇತಮಾರನಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ-1, 2, ನಂದಿನಿ ಲೇಔಟ್ – 1, ಎಂ.ಇ.ಐ. ಲೇಔಟ್-1 ಮತ್ತು 2 ಬಾಹುಬಲಿನಗರ, ಹೈಗ್ರೌಂಡ್ಸ್ (ಹೆಚ್.ಜಿ.ಆರ್), ಕೋಲ್ಸ್ ಪಾರ್ಕ್, ಮಿಲ್ಲರ್ಸ್ ರಸ್ತೆ, ಮಲ್ಲೇಶ್ವರಂ – 1 ಮತ್ತು 2, ಶ್ರೀರಾಂಪುರ, ಯಶವಂತಪುರ- 1 ಮತ್ತು 2, ಭಾಷ್ಯಂಪಾರ್ಕ್, ಸಹಕಾರ ನಗರ, ಜಕ್ಕೂರು, ಕೆಂಪಾಪುರ (ಕಾಫಿ ಬೋರ್ಡ್ ಲೇಔಟ್) ಸೇವಾ ಠಾಣೆಗಳಲ್ಲಿ ಅದಾಲತ್ ನಡೆಯಲಿದೆ.
ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‍ಆಫ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.