ಬೆಂಗಳೂರು, ಜೂನ್ 05:
ಔಷಧಿ ಸಸ್ಯಗಳ ಬೆಳೆಗಾರರ ಮಾಹಿತಿಯನ್ನು ಸಂಗ್ರಹಿಸಲು ಕರ್ನಾಟಕ ರಾಜ್ಯ ಗಿಡಮೂಲಿಕಾ ಪ್ರಾಧಿಕಾರವು ಔಷಧಿ ಸಸ್ಯ ಬೆಳೆಗಾರರ ನೋಂದಣಿ ಪ್ರಕ್ರಿಯೆಯನ್ನು ಹಮ್ಮಿಕೊಂಡಿದೆ. ಈ ಮಾಹಿತಿಯನ್ನು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ಅಗತ್ಯ ನೀತಿಯನ್ನು ರೂಪಿಸಲು ಬಳಸಲಾಗುವುದು. ನೋಂದಾಯಿತ ಸದಸ್ಯರು ಪ್ರತಿ ವರ್ಷ ಬೆಳೆದ ಬೆಳೆ ಮತ್ತಿತರ ಮಾಹಿತಿಯನ್ನು ನವೀಕರಿಸಬಹುದಾಗಿದೆ.
ಸರ್ಕಾರವು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಮೂಲ ಉದ್ದೇಶ ಔಷಧಿ ಸಸ್ಯಗಳ ಸಂರಕ್ಷಣೆ, ಕೃಷಿ ಅಭಿವೃದ್ಧಿ ಮತ್ತು ಸುಸ್ಥಿರ ನಿರ್ವಹಣೆಯನ್ನು ಪ್ರೋತ್ಸಾಹಿಸುವುದಾಗಿರುತ್ತದೆ. ರೈತರಿಗೆ ಔಷಧಿ ಸಸ್ಯಗಳ ಕೃಷಿಯಲ್ಲಿರುವ ಅವಕಾಶ, ನೀತಿ – ನಿಯಮ, ಉತ್ತಮ ಕೃಷಿ ಪದ್ದತಿ, ಮಾರುಕಟ್ಟೆ ಮತ್ತು ಅದರ ಲಾಭದ ಕುರಿತು ಅರಿವು ಮೂಡಿಸುವುದಾಗಿರುತ್ತದೆ.
ಔಷಧಿ ಸಸ್ಯ ಬೆಳೆಗಾರರ ನೋಂದಣಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕೊಠಡಿ ಸಂ. 409, 4ನೇ ಮಹಡಿ, ವನ ವಿಕಾಸ, 18ನೇ ಕ್ರಾಸ್, ಮಲ್ಲೇಶ್ವರಂ ಬೆಂಗಳೂರು 560003 ಅಥವಾ ದೂರವಾಣಿ ಸಂ. 080-23464089 ನ್ನು ಸಂಪರ್ಕಿಸಬಹುದು ಅಥವಾ ಇಲಾಖೆಯ ಜಾಲತಾಣ : http://kampa.karnataka.gov.in ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.