ಕರ್ನಾಟಕದಲ್ಲಿ ‘ಸರ್ವ್ ಸೇಫ್ ಫುಡ್’ ಯೋಜನೆಯನ್ನು ವಿಸ್ತರಿಸಿದೆ

0
22
Share this Article
0
(0)
Views: 0

ಆಹಾರ ನೈರ್ಮಲ್ಯ ಮತ್ತು ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು 1,000 ಬೀದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡುವುದು

ಬೆಂಗಳೂರು, ಡಿಸೆಂಬರ್ 4;

ಕರ್ನಾಟಕದಲ್ಲಿ ‘ಸರ್ವ್ ಸೇಫ್ ಫುಡ್’ ಯೋಜನೆಯ ಭೌಗೋಳಿಕ ಹೆಜ್ಜೆಗುರುತುಗಳನ್ನು ವಿಸ್ತರಿಸುತ್ತ ನೆಸ್ಲೆ ಇಂಡಿಯಾ, ಬೆಂಗಳೂರಿನ ಮತ್ತು ಮೈಸೂರಿನ 1,000 ಬೀದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಲು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮತ್ತು ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಟ್ರೀಟ್ ವೆಂಡರ್ಸ್ ಆಫ್ ಇಂಡಿಯಾ (ಎನ್.ಎ.ಎಸ್.ವಿ.ಐ) ನೊಂದಿಗೆ ತನ್ನ ಸಹಯೋಗವನ್ನು ಮುಂದುವರೆಸಿದೆ. ಅಲ್ಲಿಗೆ ರಾಜ್ಯದಲ್ಲಿ ಒಟ್ಟು 2,000 ಬೀದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಿದಂತಾಗುತ್ತದೆ. 2016 ರಲ್ಲಿ ಪ್ರಾರಂಭವಾದಾಗಿನಿಂದ, ಪ್ರಾಜೆಕ್ಟ್ ‘ಸರ್ವ್ ಸೇಫ್ ಫುಡ್’ 26 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ 68,500 ಬೀದಿ ಆಹಾರ ಮಾರಾಟಗಾರರಿಗೆ ಪ್ರಯೋಜನವಾಗಿದೆ; ವಿವಿಧ ಹಿತಾಸಕ್ತಿದಾರರನ್ನು ಒಟ್ಟುಗೂಡಿಸಿ ಸಮಗ್ರ ತರಬೇತಿ ಕಾರ್ಯಕ್ರಮವನ್ನು ರಚಿಸಿದೆ.

“ರಾಜ್ಯದಲ್ಲಿ ಆಹಾರ ನೈರ್ಮಲ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ರಾಷ್ಟ್ರೀಯ ಬೀದಿ ವ್ಯಾಪಾರಿಗಳ ಸಂಘ (ಎನ್.ಎ.ಎಸ್.ವಿ.ಐ) ಮತ್ತು ನೆಸ್ಲೆ ಇಂಡಿಯಾ ಪರಸ್ಪರ ಸಹಯೋಗದೊಂದಿಗೆ, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಸಹಭಾಗಿತ್ವದಲ್ಲಿ, ರಾಜ್ಯದಲ್ಲಿ ಈ ಕಾರ್ಯಸೂಚಿಗೆ ಕೊಡುಗೆ ನೀಡಿವೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಪ್ರಾಜೆಕ್ಟ್ ಸರ್ವ್ ಸೇಫ್ ಫುಡ್, ಬೀದಿ ಆಹಾರ ಮಾರಾಟಗಾರರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಮತ್ತು ರಾಜ್ಯದಲ್ಲಿ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಬೇಕೆಂದು ನಾನು ಬಯಸುತ್ತೇನೆ.” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ನೆಸ್ಲೆ ಇಂಡಿಯಾದ ಕಾಪೆರ್Çರೇಟ್ ವ್ಯವಹಾರಗಳು ಮತ್ತು ಸುಸ್ಥಿರತೆಯ ನಿರ್ದೇಶಕರಾದ ಸಂಜಯ್ ಖಜುರಿಯಾ ಅವರು, “ಪ್ರಾಜೆಕ್ಟ್ ಸರ್ವ್ ಸೇಫ್ ಫುಡ್ ನಮ್ಮ ಸ್ವಂತ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯμÉ್ಟೀ ಅಲ್ಲದೆ ಒಟ್ಟಾರೆ ಆಹಾರ ಸುರಕ್ಷತೆಯನ್ನೆ ಸುಧಾರಿಸುವ ನಮ್ಮ ಬದ್ಧತೆಯ ಸಾಕಾರರೂಪವಾಗಿದೆ.. ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಪದ್ಧತಿಗಳ ಕುರಿತು ಸೂಕ್ತವಾದ ತರಬೇತಿ ನೀಡಿ ಅವರ ಕೌಶಲ್ಯಗಳನ್ನು ಸುಧಾರಿಸುವ ಮೂಲಕ ಬೀದಿ ಆಹಾರ ಮಾರಾಟಗಾರರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ಮುಂದೆಯೂ ನಾವು ನಮ್ಮ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ ಮತ್ತು ಸಮಾಜದಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.

ನೆಸ್ಲೆ ಇಂಡಿಯಾ, 2016 ರಲ್ಲಿ ಪ್ರಾಜೆಕ್ಟ್ ಸರ್ವ್ ಸೇಫ್ ಫುಡ್ ಅನ್ನು ಪ್ರಾರಂಭಿಸಿತು ಮತ್ತು ಅಸ್ಸಾಂ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಬಿಹಾರ, ಛತ್ತೀಸ್‍ಗಢ, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾಖರ್ಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಒಡಿಶಾ, ಪುದುಚೇರಿ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಬೀದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಿದೆ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a reply

Please enter your comment!
Please enter your name here