ಶಿವಮೊಗ್ಗ, ಜೂನ್ 13:
ಶಿವಮೊಗ್ಗ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಬ್ಯಾಂಕುಗಳಿಂದ ಸಾಲ ಪಡೆದು ಉತ್ಪಾದನಾ/ ಸೇವಾ ಘಟಕ ಪ್ರಾರಂಭಿಸಲು ಗ್ರಾಮೀಣ ಮತ್ತು ನಗರ ಪ್ರದೇಶಗಳ ಯುವಕ/ಯುವತಿಯರಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ಪಾದನಾ ಮತ್ತು ಸೇವಾ ವಲಯದ ಚಟುವಟಿಕೆ ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಶೇ. 25 ರಿಂದ 35ರವರೆಗೆ ಮತ್ತು ನಗರ ಪ್ರದೇಶದವರಿಗೆ ಶೇ. 15 ರಿಂದ 25ರವರೆಗೆ ಸಹಾಯಧನ ಲಭ್ಯವಿದ್ದು, ಉತ್ಪಾದನಾ ಘಟಕಗಳಿಗೆ ರೂ. 50 ಲಕ್ಷ ಹಾಗೂ ಸೇವಾ ಘಟಕಗಳಿಗೆ 20 ಲಕ್ಷ ಗರಿಷ್ಠ ಯೋಜನಾ ವೆಚ್ಚದ ಘಟಕಗಳಿಗೆ ಬ್ಯಾಂಕುಗಳಿಂದ ಆರ್ಥಿಕ ನೆರವು ಪಡೆಯಲು ಅವಕಾಶವಿರುತ್ತದೆ.
ಆಸಕ್ತರು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ, ‘ಬಿ’ ಬ್ಲಾಕ್-7, ಎರಡನೇ ಮಹಡಿ, ಉಪವಿಭಾಗಾಧಿಕಾರಿಗಳ ಕಚೇರಿ ಕಟ್ಟಡ, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ ಇಲ್ಲಿಗೆ ಭೇಟಿ ನೀಡಿ ನಿಖರ ಮಾಹಿತಿ ಪಡೆದು ಜಾಲತಾಣ https://www.kviconline.gov.in/pmegpeportal ರಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಕೆ. ಗೋವಿಂದಪ್ಪ ಇವರನ್ನು ಕಚೇರಿಯಲ್ಲಿ ಖುದ್ದಾಗಿ ಅಥವಾ ದೂ.ಸಂ.: 08182-223273/ 9480825637 ಇವರನ್ನು ಸಂಪರ್ಕಿಸುವುದು.